ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಹೇಡಿಗಳು ಎಂದು ಜರಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಗೆ ಮಾಜಿ ಸಚಿವ ಬಸವರಾಜ ಹೊರಟ್ಟಿ ತಿರುಗೇಟು ನೀಡಿದ್ದು, ರೈತರು ಹೇಡಿಗಳಲ್ಲ. ರೈತರು ಹುಟ್ಟು ಸ್ವಾಭಿಮಾನಿಗಳು ಎಂದಿದ್ದಾರೆ.
ಹೇಡಿತನ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರೈತರು ಎಂದು ಹೇಡಿಗಳಲ್ಲ, ಪರಸ್ಥಿತಿ ಮತ್ತು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ರೈತರು ಮರ್ಯಾದಸ್ತರು, ಸಾಲ ಕೊಟ್ಟವರು ಪೀಡಿಸುವಾಗ ಮರ್ಯಾದೆಗೆ ಅಂಜಿ ದಿಕ್ಕು ತೋಚದಂತಾಗಿ ಆತ್ಮಹತ್ಯೆಗೆ ಶರಣಾಗುತ್ತಾನೆ, ಕೃಷಿ ಸಚಿವರು ಹೇಳಿದಂತೆ ರೈತ ಹೇಡಿಯಲ್ಲ ಎಂದು ಹೊರಟ್ಟಿ ಹೇಳಿದರು.
Laxmi News 24×7