ಮುಂಬೈ,ಡಿ.2- ಇತ್ತೀಚೆಗೆ ಭುಜದ ಶಸ್ತ್ರ ಚಿಕಿತ್ಸೆಗೆ ಒಳ ಗಾಗಿದ್ದ ಬಾಲಿವುಡ್ ನಟ ಹಾಗೂ ಸಂಸದ ಸನ್ನಿಡಿಯೋಲ್ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಸನ್ನಿಡಿಯೋಲ್ ಅವರು ತಮ್ಮ ಟ್ವಿಟ್ಟರ್ ಮೂಲಕ ಈ ಸುದ್ದಿ ತಿಳಿಸಿದ್ದು ನನಗೆ ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿರುವುದರಿಂದ ನಾನು ವಿಶ್ರಾಂತಿ ಪಡೆಯುತ್ತಿದ್ದೇನೆ, ನನ್ನ ಸಂಪರ್ಕದಲ್ಲಿ ಇರುವವರು ಕೂಡ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಭುಜದ ಶಸ್ತ್ರಚಿಕಿತ್ಸೆಯ ನಂತರ ಸನ್ನಿಡಿಯೋಲ್ ಮನಾಲಿ ಯಲ್ಲಿರುವ ತಮ್ಮ ಫಾರ್ಮ್‍ಹೌಸ್‍ನಲ್ಲಿ ವಿಶ್ರಾಂತಿ ಪಡೆದಿದ್ದರು.