Breaking News

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

Spread the love

ದೀಪಾವಳಿ ಹಬ್ಬದ ಅನಂತರ ಬರುವ ಇನ್ನೊಂದು ಹಬ್ಬ ತುಳಸಿ ಹಬ್ಬ ಅಥವಾ ತುಳಸೀ ವಿವಾಹ. ಕಾರ್ತಿಕ ಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ಉತ್ಥಾನ ದ್ವಾದಶಿಯನ್ನು ತುಳಸೀಯ ವಿವಾಹ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ.

ಈ ದಿನದಂದು ಭಗವಾನ್‌ ವಿಷ್ಣುವು ತುಳಸೀ ದೇವಿಯನ್ನು ಸಾಲಿಗ್ರಾಮದ ರೂಪದಲ್ಲಿ ಅಥವಾ ಪ್ರಬೋಧಿನಿ ಏಕಾದಶಿಯಂದು ಶ್ರೀ ಕೃಷ್ಣನ ಅವತಾರದಲ್ಲಿ ವಿವಾಹವಾದರು ಎನ್ನಲಾಗಿದೆ. ಹಿಂದೂ ಧರ್ಮ ಗ್ರಂಥಗಳ ಪ್ರಕಾರ, ತುಳಸೀ ಮಾತೆಯನ್ನು ವಿಷ್ಣುವಿನ ಪತ್ನಿಯಾದ ಲಕ್ಷ್ಮೀ ದೇವಿಯ ಅವತಾರ ಎಂದು ಹೇಳಲಾಗುತ್ತದೆ.

ಕಾರ್ತಿಕ ಮಾಸದಲ್ಲಿ ತುಳಸೀ ಪ್ರತಿ ಷ್ಠಾಪನೆ ಅತ್ಯಂತ ಪುಣ್ಯಪ್ರದ ಮಾತ್ರ ವಲ್ಲದೆ ಅತ್ಯಂತ ಫ‌ಲಪ್ರದವೂ ಹೌದು. ತುಳಸೀಯೊಂದಿಗೆ ಶ್ರೀವಿಷ್ಣುವಿನ (ಬಾಲಕೃಷ್ಣನ ಮೂರ್ತಿಯ) ವಿವಾಹ ವನ್ನು ಮಾಡುವುದೇ ತುಳಸೀ ವಿವಾಹದ ವಿಧಿಯಾಗಿದೆ. ವಿವಾಹದ ಹಿಂದಿನ ದಿನ ತುಳಸೀ ಬೃಂದಾವನವನ್ನು ಬಣ್ಣ ಹಚ್ಚಿ ಅಲಂಕರಿಸಲಾಗುತ್ತದೆ. ತುಳಸೀ ಬೃಂದಾವನದಲ್ಲಿ ಕಬ್ಬು, ಚೆಂಡು ಹೂವುಗಳಿಂದ ಸಿಂಗರಿಸಲಾಗುತ್ತದೆ ಮತ್ತು ತುಳಸೀ ಗಿಡದ ಬುಡದಲ್ಲಿ ಹುಣಸೆ ಮತ್ತು ನೆಲ್ಲಿ ಕಾಯಿಗಳಿಂದ ತುಂಬಿರುವ ಆ ಗಿಡಗಳ ಗೆಲ್ಲುಗಳನ್ನು ಇಡುತ್ತಾರೆ. ತುಳಸೀ ಗಿಡವನ್ನು ಹೂವುಗಳು, ಆಭರಣಗಳು ಮತ್ತು ಮಾವಿನ ಎಲೆಗಳಿಂದ ಅಲಂಕರಿಸುತ್ತಾರೆ.

ತುಳಸೀ ಕಟ್ಟೆಯನ್ನು ಅಲಂಕರಿಸಿ ವಿಷ್ಣುವಿನ ಅವತಾರ ಕೃಷ್ಣನ ಮೂರ್ತಿ ಯನ್ನಿರಿಸಿ ಪೂಜಿಸಲಾಗುತ್ತದೆ. ದೀಪದಿಂದ ತುಳಸೀ ಕಟ್ಟೆಯ ಸುತ್ತ ಅಲಂಕರಿಸಲಾಗುತ್ತದೆ. ಈ ವಿವಾಹದ ವಿಧಿಯನ್ನು ಸಾಯಂಕಾಲ ಮಾಡುತ್ತಾರೆ. ಮಂತ್ರಗಳನ್ನು ಪಠಿಸಲಾಗುತ್ತದೆ ಮತ್ತು ತುಳಸೀ ವಿವಾಹದ ವಿಧಿವಿಧಾನಗಳನ್ನು ಭಕ್ತಿ ಮತ್ತು ಗೌರವದಿಂದ ನಡೆಸಲಾಗುತ್ತದೆ.

ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ಮಳೆಯು ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸನ್ಯಾಸಿಗಳು ದೇಶಸಂ ಚಾರವನ್ನು ಮಾಡದೇ ಒಂದೆಡೆಯಲ್ಲಿ, ಚಾತುರ್ಮಾಸ ವ್ರತವನ್ನು ಆಚರಿ ಸುವರು. ಆ ಸಂದರ್ಭದಲ್ಲಿ ಶ್ರೀಮನ್ನಾರಾಯಣನು ನಿದ್ರಾವಸ್ಥೆ ಯಲ್ಲಿರುತ್ತಾನೆಂದೂ, ಚಾತುರ್ಮಾಸ್ಯ ಮುಗಿಯುವ ವೇಳೆಯಲ್ಲಿ ಅವನನ್ನು ಎಬ್ಬಿಸಲು ಸುಪ್ರಭಾತ ವನ್ನು ಹಾಡುವರು. ಉತ್ಥಾನ ವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರಬಂದು ತನ್ನ ಭಕ್ತರಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಈ ದಿನವನ್ನು ಕ್ಷೀರಾಬ್ಧಿ ವ್ರತವೆಂದೂ ಆಚರಿಸಲಾಗುತ್ತದೆ. ತುಳಸೀ ವಿವಾಹದ ಬಳಿಕ ಚಾತುರ್ಮಾಸ್ಯದಲ್ಲಿ ಕೈಗೊಂಡ ಎಲ್ಲ ವ್ರತಗಳನ್ನು ಸಮಾಪ್ತಗೊಳಿಸುತ್ತಾರೆ. ಚಾತುರ್ಮಾಸ್ಯದಲ್ಲಿ ಯಾವ ಪದಾರ್ಥ ಗಳನ್ನು ವಜ್ಯì ಮಾಡಿರುತ್ತಾರೆಯೋ, ಆ ಪದಾರ್ಥಗಳನ್ನು ದಾನ ಮಾಡಿ ಅನಂತರ ತಾವೂ ಸೇವಿಸುತ್ತಾರೆ.

ಇನ್ನು ತುಳಸೀಯಲ್ಲಿ ತ್ರಿಮೂರ್ತಿ ಗಳ ಸನ್ನಿಧಾನವಿದೆ ಎಂಬ ಪ್ರತೀ ತಿಯೂ ಇದೆ. ತುಳಸೀ ದರ್ಶನದಿಂದ ಎಲ್ಲ ಪಾಪಗಳೂ ನಿವಾರಣೆಯಾ ಗುತ್ತವೆ. ದೇಹ ಶುದ್ಧಿಗೆ ಅದರ ಸ್ಪರ್ಶ, ನಮಸ್ಕಾರದಿಂದ ಕಾಯಿಲೆ ದೂರ, ತುಳಸೀಗೆ ನೀರು ಹಾಕುವುದರಿಂದ ಯಮನ ಪಾಶದಿಂದ ಮುಕ್ತಿ, ತುಳಸೀ ಬೆಳೆಸುವುದರಿಂದ ಹರಿಭಕ್ತಿಯ ಸಂಪಾದನೆ, ಶ್ರೀಹರಿಗೆ ತುಳಸೀಯನ್ನು ನೀಡುವುದರಿಂದ ಮೋಕ್ಷ ಪ್ರಾಪ್ತಿ. ಸರ್ವ ದೇವತೆಗಳ ಸನ್ನಿಧಾನ ವಿರುವುದರಿಂದ ಮತ್ತದರ ದಿವೌÂಷಧೀ ಗುಣಗಳಿಂದ ಮನೆಯನ್ನೂ ಮನೆಮಂದಿಯನ್ನೂ ತುಳಸೀ ಕಾಪಾ ಡುತ್ತದೆ. ತುಳಸೀ ಪೂಜೆ ಅಥವಾ ತುಳಸೀ ವಿವಾಹದ ಈ ಆಚರ ಣೆಯು ವೈದಿಕ ಸಂಸ್ಕೃತಿಯಲ್ಲಿ ತುಳಸೀ ದೇವಿಯ ಪ್ರಾಮುಖ್ಯವನ್ನು ಹಾಗೂ ಭಕ್ತಿ ಮತ್ತು ಶುದ್ಧತೆಯ ಮಹತ್ವವನ್ನು ಸೂಚಿಸುತ್ತದೆ. ತುಳಸೀ ವಿವಾಹದಲ್ಲಿ ಪಾಲ್ಗೊಳ್ಳುವುದು ಭಕ್ತರಿಗೆ ಆಶೀರ್ವಾದ, ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

-ನಿತ್ಯಾನಂದ ಕಾಮತ್‌, ಮೂಡುಬಿದಿರೆ


Spread the love

About Laxminews 24x7

Check Also

ಸಂತ ಜನಾಬಾಯಿ ಮಂದಿರ ಹಾಗೂ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಕುಟುಂಬ ಸಮೇತ ಭೇಟಿ

Spread the loveಪಂಢರಪುರದ ಗೋಪಾಲಪುರದಲ್ಲಿರುವ ಸಂತ ಜನಾಬಾಯಿ ಮಂದಿರ ಹಾಗೂ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಕುಟುಂಬ ಸಮೇತ ಭೇಟಿ ನೀಡಿ,ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ