ಮುಂಬೈ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮುಂಬೈನ ಅಂಧೇರಿ ಸಮೀಪದ ಚಾಂದೀವಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಸೀಂಖಾನ್ ಕಚೇರಿಗೆ ತೆರಳಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋಮವಾರ ತಡರಾತ್ರಿ ಸಿಎಂ ಏಕನಾಥ ಶಿಂಧೆ ಖಾನ್ ಅವರ ಕಚೇರಿ ಮುಂದೆ ತೆರಳುತ್ತಿದ್ದರು.
ಈ ವೇಳೆ ಆ ಪಕ್ಷದ ಕಾರ್ಯಕರ್ತರು “ವಿಶ್ವಾಸಘಾತಕ’ ಎಂದು ಘೋಷಣೆ ಹಾಕಿದ್ದರು. ಜತೆಗೆ ಶಿಂಧೆ ಕಾರನ್ನು ತಡೆಯಲು ಯತ್ನಿಸಿದರು ಎಂದು ಆರೋಪಿಸಲಾಗಿದೆ.
ಇದರಿಂದ ಕೋಪಗೊಂಡ ಅವರು ಕಾರಿನಿಂದ ಇಳಿದು ಅಭ್ಯರ್ಥಿಯ ಕಚೇರಿಗೆ ತೆರಳಿ “ನಿಮ್ಮ ಪಕ್ಷದ ಮುಖಂಡರಿಗೆ ದುರ್ವರ್ತನೆಯನ್ನೇ ಕಲಿಸಿ’ ಎಂದು ತರಾಟೆಗೆ ತೆಗೆದುಕೊಂಡರು. ನಂತರ ಅವರು ಕಾರನ್ನೇರಿ ತೆರಳಿದರು. ಈ ಘಟನೆಯ ವಿಡಿಯೋ ವೈರಲ್ ಆಗಿದೆ.