ವಯನಾಡ್: ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ಕೇರಳದ ವಯನಾಡ್ ಲೋಕಸಭೆ ಕ್ಷೇತ್ರದ ಉಪಚುನಾವಣೆ ಬುಧವಾರ(ನ.13) ನಡೆಯಲಿದೆ.
ಕಾಂಗ್ರೆಸ್‌ನ ಗಾಂಧಿ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆಯಿಂದಾಗಿ ಈ ಉಪಚುನಾವಣೆಯು ದೇಶದ ಗಮನ ಸೆಳೆದಿದೆ.
ಇಲ್ಲಿಂದ ಗೆದ್ದರೆ ಪ್ರಿಯಾಂಕಾ ಅವರು ಅಧಿಕೃತವಾಗಿ ಚುನಾವಣ ರಾಜಕಾರಣಕ್ಕೆ ಪ್ರವೇಶ ಪಡೆಯಲಿದ್ದಾರೆ.
ಆಗಸ್ಟ್‌ನಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ತತ್ತರಿಸಿರುವ ವಯನಾಡು ಜನರು ಆರೇಳು ತಿಂಗಳಲ್ಲೇ ಮತ್ತೂಮ್ಮೆ ತಮ್ಮ ಬೆರಳಿಗೆ ಶಾಯಿ ಹಚ್ಚಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಕೇರಳದ ಒಟ್ಟು 20 ಲೋಕಸಭೆ ಕ್ಷೇತ್ರಗಳಲ್ಲಿ ವಯನಾಡ್ ಕ್ಷೇತ್ರ ತನ್ನದೇ ಕಾರಣಗಳಿಂದ ವಿಶಿಷ್ಟವಾಗಿದೆ. ಪ್ರಿಯಾಂಕಾ ವಾದ್ರಾ (ಕಾಂಗ್ರೆಸ್), ನವ್ಯಾ ಹರಿದಾಸ್(ಬಿಜೆಪಿ), ಸತ್ಯನ್ ಮೋಕೇರಿ(ಎಲ್‌ಡಿಎಫ್) ಸೇರಿ 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕ್ಷೇತ್ರದ 14 ಮತದಾರರಿದ್ದಾರೆ.
ಪ್ರಿಯಾಂಕಾ ಗಾಂಧಿ ಗೆಲ್ತಾರಾ?: ಸಾಕಷ್ಟು ರಾಜಕೀಯ ಅನುಭವವಿದ್ದರೂ ಇದೇ ಮೊದಲ ಬಾರಿಗೆ ಚುನಾವಣ ರಾಜಕೀಯಕ್ಕೆ ಪ್ರಿಯಾಂಕಾ ಧುಮುಕಿದ್ದಾರೆ. ಅವರ ಪರವಾಗಿ ಕಾಂಗ್ರೆಸ್ ನಾಯಕರು ಹಗಲಿರುಳು ಪ್ರಚಾರ ನಡೆಸಿದ್ದಾರೆ. ರಾಹುಲ್ ಗಾಂಧಿ ಕೂಡ, ವಯನಾಡಿಗೆ ಇಬ್ಬರು ಎಂಪಿಗಳಿರಲಿದ್ದಾರೆ ಎಂದು ಹೇಳುವ ಮೂಲಕ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ, ಪ್ರಿಯಾಂಕಾ ಕೂಡ ಭಾವನಾತ್ಮಕವಾಗಿ ಜನರನ್ನು ತಲುಪುತ್ತಿದ್ದಾರೆ.
Laxmi News 24×7