ಮುಡಾ ಹಗರಣ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಸಂಕಷ್ಟ ತಂದೊಡ್ಡಿದೆ. ಒಂದು ಕಡೆ ತನಿಖೆಯ ಭೀತಿ ಮತ್ತೊಂದು ಕಡೆಯಲ್ಲಿ ಸಿಎಂ ಸ್ಥಾನ (CM Seat) ಕಳೆದುಕೊಳ್ಳು ಚಿಂತೆ ಕಾಡುತ್ತಿದೆ. ಪ್ರತಿಪಕ್ಷದ ನಾಯಕರು (ದಿನಕ್ಕೊಬ್ಬರಂತೆ ರಾಜೀನಾಮೆವಿಚಾರದ ಕುರಿತು ಮಾತನಾಡಿದ್ದಾರೆ.
ಸಿದ್ದರಾಮಯ್ಯ ಅವರು ಇವತ್ತಿಲ್ಲ ನಾಳೆ ರಾಜೀನಾಮೆ ಕೊಡಲೇಬೇಕು. ಬಂಡತನದಿಂದ ರಾಜೀನಾಮೆ ಕೊಡುವುದಿಲ್ಲ ಅಂದ್ರೆ ಜನ ದಂಗೆ ಏಳುತ್ತಾರೆ ಎಂದು ಮಾಜಿ ಸಿಎಂ, ಹಾಲಿ ಸಂಸದ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ.
ಈ ಕ್ಷಣದಲ್ಲಿ ಚುನಾವಣೆಯಾದ್ರೇ ಬಿಜೆಪಿಗೆ ಅಭೂತಪೂರ್ವ ಗೆಲುವು
ಈ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ದುರಾಡಳಿತ, ಭ್ರಷ್ಟಾಚಾರ ಮಾಡಿದೆ. ಬಹುಶಃ ಕರ್ನಾಟಕ ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ಕ್ಯಾಂ ಯಾವತ್ತೂ ಆಗಿಲ್ಲ. ಮುಡಾ ಹಗರಣ, ವಾಲ್ಮೀಕಿ ಹಗರಣದಿಂದ ಜನ ರೋಷಿಹೋಗಿದ್ದಾರೆ. ಈ ಕ್ಷಣದಲ್ಲಿ ಚುನಾವಣೆ ಆದ್ರೇ ಬಿಜೆಪಿ ಅಭೂತಪೂರ್ವವಾಗಿ ಗೆದ್ದು ಬರುತ್ತದೆ ಎಂದು ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.