ಮುಂಬೈ: ಕೊರೊನಾ ವೈರಸ್ ಭೀತಿಯಿಂದ ಮುಚ್ಚಿದ್ದ ಶಿರಡಿ ಸಾಯಿಬಾಬಾ ಮಂದಿರ ಮತ್ತೆ ಓಪನ್ ಆಗಿದೆ. ಸದ್ಯ ಸಾಯಿಬಾಬಾ ದರ್ಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿದ್ದು, ಮಂಗಳವಾರದವರೆಗೆ ಸುಮಾರು 1 ಲಕ್ಷಕ್ಕೂ ಹೆಚ್ಚು ಭಕ್ತರು ಸಾಕ್ಷಿಯಾದರು.
ವಿಶ್ವದಾದ್ಯಂತ ಭಕ್ತರು 3.09 ಕೋಟಿ ರೂ., 2,85,629 ರೂ. ಮೌಲ್ಯದ 64 ಗ್ರಾಂ ಚಿನ್ನದ ಜೊತೆಗೆ 93,000 ರೂ. ಮೌಲ್ಯದ 2.8 ಕೆ.ಜಿ ಬೆಳ್ಳಿಯನ್ನು ದಾನ ಮಾಡಿದ್ದಾರೆ.
ಆನ್‍ಲೈನ್ ಮೂಲಕ ದೇವರ ದರ್ಶನಕ್ಕೆ ಬುಕ್ ಮಾಡಲಾಗುತ್ತಿದೆ. ನವೆಂಬರ್ 16 ಸೋಮವಾರದಿಂದ ರಾಜ್ಯದ ಎಲ್ಲಾ ದೇವಾಲಯಗಳು ಹಾಗೂ ಪೂಜಾ ಸ್ಥಳಗಳನ್ನು ಮತ್ತೆ ತೆರೆಯಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿತ್ತು.
ಕಳೆದ ಮಾರ್ಚ್ ತಿಂಗಳಲ್ಲಿ ಕೊರೊನಾ ವೈರಸ್ ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದಾಗಿನಿಂದ ಮಹಾರಾಷ್ಟ್ರದಲ್ಲಿ ಧಾರ್ಮಿಕ ಸ್ಥಳಗಳು ಮುಚ್ಚಲ್ಪಟ್ಟಿತ್ತು. ದೇವಾಲಯಗಳನ್ನು ಪುನಃ ತೆರೆಯುವಂತೆ ವಿರೋಧ ಪಕ್ಷಗಳು ಮತ್ತು ಕೆಲವು ಧಾರ್ಮಿಕ ಗುಂಪುಗಳು ಒತ್ತಾಯಿಸಿದರೂ, ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ನಡೆಯುತ್ತಿರುವ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗಲು ಕಾಯುತ್ತಿತ್ತು.