Breaking News

ರಾಜ್ಯಕ್ಕೆ ಬರುತ್ತಿದ್ದ ನೀರನ್ನು ತಡೆ ಹಿಡಿದ ಮಹಾ ಸರ್ಕಾರದ ಕ್ರಮಕ್ಕೆ ರೈತರು ಆಕ್ರೋಶ

Spread the love

ಚಿಕ್ಕೋಡಿ: ಕೃಷ್ಣಾ ನದಿಯಿಂದ ಹರಿದು ಬರುತ್ತಿದ್ದ ನೀರನ್ನು ಮಹಾರಾಷ್ಟ್ರ ಸರ್ಕಾರ ತಡೆ ಹಿಡಿದಿದೆ. ಇದರಿಂದ ಮಹಾರಾಷ್ಟ್ರ ಸರ್ಕಾರ ಕರ್ನಾಟಕ ರಾಜ್ಯದ ವಿರುದ್ದ ಮತ್ತೆ ಕ್ಯಾತೆ ತೆಗೆದಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಕೃಷ್ಣಾ ನೀರಿನ ವಿಷಯವಾಗಿ ಮತ್ತೆ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆದಿದೆ.

ಕರ್ನಾಟಕಕ್ಕೆ ಹರಿದು ಬರುತ್ತಿದ್ದ ನೀರನ್ನು ಮೇ.26ರ ರವಿವಾರ ಮಹಾರಾಷ್ಟ್ರ ಸರಕಾರ ತಡೆ ಹಿಡಿದಿದೆ.ರಾಜ್ಯಕ್ಕೆ ಬರುತ್ತಿದ್ದ ನೀರನ್ನು ತಡೆ ಹಿಡಿದ ಮಹಾ ಸರ್ಕಾರದ ಕ್ರಮಕ್ಕೆ ರೈತರು ಆಕ್ರೋಶ

ಗಡಿ ಭಾಗದ ರಾಜಾಪೂರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ ಹರಿದು ಬರುತ್ತಿದ್ದ ಕೃಷ್ಣಾ ನದಿ ನೀರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿರುವ ರಾಜಾಪುರ ಬ್ಯಾರೇಜ್ ಬಳಿ ನಾಲ್ವರು ಸಿಬ್ಬಂದಿಗಳನ್ನು ಮಹಾರಾಷ್ಟ್ರ ಸರ್ಕಾರ ನಿಯೋಜನೆ ಮಾಡಿದೆ.

ಇಬ್ಬರು ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಇಬ್ಬರು ನೀರಾವರಿ ಇಲಾಖೆಯ ಸಿಬ್ಬಂದಿ ನಿಯೋಜಿಸಲಾಗಿದೆ. ಕರ್ನಾಟಕಕ್ಕೆ ನೀರು ಹೋಗದಂತೆ ಅಧಿಕಾರಿಗಳು ಕಾವಲು ಕಾಯುತ್ತಿದ್ದಾರೆ.

ನಾಲ್ವರು ಸಿಬ್ಬಂದಿಯ ಎರಡು ಗಸ್ತು ತಂಡ ನೇಮಕ ಮಾಡಿದ ಮಹಾರಾಷ್ಟ್ರ ಸರ್ಕಾರ, ಮಹಾರಾಷ್ಟ್ರ ಗಡಿಯ ರಾಜಾಪುರ ಬಳಿಯ ಕೃಷ್ಣಾ ನದಿಯ ಬಳಿ ನೀರು ತಡೆ ಹಿಡಿದ ಮಹಾ ಸರ್ಕಾರ. ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳಲ್ಲಿ ಹರಿದು ಬರುತ್ತಿದ್ದ ನೀರು. ಹೆಚ್ಚು ಪ್ರಮಾಣದಲ್ಲಿ ಮಳೆಯಾಗ್ತಿದ್ದ ಕಾರಣಕ್ಕೆ ಹರಿದು ಬರುತ್ತಿದ್ದ ನೀರನ್ನು ತಡೆ ಹಿಡಿದಿರುವುದು ಸರಿಯಾದ ಕ್ರಮವಲ್ಲ ಎಂದು ರೈತ ಸಂಘದ ಮುಖಂಡ ಮಂಜುನಾಥ ಪರಗೌಡ ಆಕ್ರೋಶ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಕೇಂದ್ರದ ದ್ವೇಷ ರಾಜಕಾರಣ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಸುವರ್ಣಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ

Spread the loveಬೆಳಗಾವಿ: ಕೇಂದ್ರ ಸರ್ಕಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ