ವಿಜಯಪುರ: ಗುಮ್ಮಟನಗರಿ ವಿಜಯಪುರದಲ್ಲಿ ಮತ್ತೆ ಶೂಟೌಟ್ ಆಗಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ನಡೆದ ಮಾತಿನ ಚಕಮಕಿಯಲ್ಲಿ ಓರ್ವನ ಮೇಲೆ ಮತ್ತೋರ್ವ ಗುಂಡು ಹಾರಿಸಿರುವ ಘಟನೆ ವಿಜಯಪುರ ನಗರದ ಜಿ.ಪಂಚಾಯತ್ ಹತ್ತಿರ ನಡೆದಿದೆ.ಬಾರಾಕೊಟ್ರಿ ತಾಂಡಾ ನಿವಾಸಿ ಪದ್ದು ರಾಠೋಡ್ ಮೇಲೆ ಗುಂಡಿನ ದಾಳಿ ಆಗಿದ್ದು, ತುಳಸಿರಾಮ್ ಎಂಬಾತ ಶೂಟೌಟ್ ಗೈದು ಪರಾರಿಯಾಗಿದ್ದಾನೆ. ಹಣಕಾಸಿನ ವ್ಯವಹಾರ ಹಿನ್ನೆಲೆ ಶೂಟೌಟ್ ನಡೆದಿದೆ ಎನ್ನಲಾಗಿದ್ದು, ಗಾಯಗೊಂಡಿರುವ ಪದ್ದುನನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಅನುಪಮ ಅಗ್ರವಾಲ್, ಎಎಸ್ಪಿ ರಾಮ್ ಅರಸಿದ್ಧಿ ಹಾಗೂ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗೆ ಪೊಲೀಸರು ಬಲೆಬೀಸಿದ್ದಾರೆ.
Laxmi News 24×7