Breaking News

ಮಗನ ಜೊತೆ ತಂದೆ ಮೇಲೆಯೂ ಎಫ್​ಐಆರ್; A1 ರೇವಣ್ಣ, A2 ಪ್ರಜ್ವಲ್​​

Spread the love

ಬೆಂಗಳೂರು: ಪೆನ್​ಡ್ರೈವ್ ಪ್ರಕರಣ (Pen Drive Case) ಸಂಬಂಧ ಮನೆಕೆಲಸದಾಕೆ ನೀಡಿದ ದೂರಿನಡಿಯಲ್ಲಿ ಮಾಜಿ ಸಚಿವ ಹೆಚ್​ಡಿ ರೇವಣ್ಣ (Former Minister HD Revanna) ಮತ್ತು ಸಂಸದ ಪ್ರಜ್ವಲ್ ರೇವಣ್ಣ (MP Prajwal Revanna) ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.ಮಾನಸಿಕವಾಗಿ ಹಾಗೂ ದೈಹಿಕವಾಗಿ ಜರ್ಜರಿತ ಮತ್ತು ಮತ್ತು ಜೀವ ಭಯ ಇರುವದರಿಂದ ದೂರು ದಾಖಲಿಸಲು ವಿಳಂಬವಾಗಿದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಪ್ರಕರಣದಲ್ಲಿ A1 ಆರೋಪಿಯಾಗಿ ಹೆಚ್​ಡಿ ರೇವಣ್ಣ, A2 ಸ್ಥಾನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಇದ್ದಾರೆ. ದೂರುದಾರ ಮಹಿಳೆ ರೇವಣ್ಣ ಅವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ದೂರುದಾರ ಮಹಿಳೆ ಭವಾನಿ ರೇವಣ್ಣ ಸೋದರತ್ತೆ ಮಗಳಾಗಿದ್ದಾರೆ.

ಎಫ್​ಐಆರ್​ನಲ್ಲಿರುವ ಅಂಶಗಳು ಏನು?

ಸಂತ್ರಸ್ತೆ 2015ರಲ್ಲಿ ಹೆಚ್​ಡಿ ರೇವಣ್ಣ ಸೂಚನೆಯ ಮೇರೆಗೆ ಹಾಸ್ಟೆಲ್​ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ನಾಲ್ಕು ವರ್ಷಗಳ ನಂತರ ಸೂರಜ್ ರೇವಣ್ಣ ಮದುವೆ ಸಂದರ್ಭದಲ್ಲಿ ಕೆಲಸಕ್ಕಾಗಿ ಮನೆಗೆ ಕರೆಸಿಕೊಳ್ಳಲಾಯ್ತು. ಅಲ್ಲಿ ಸಂತ್ರಸ್ತೆ ಮೂರು ವರ್ಷ ಕೆಲಸ ಮಾಡಿದ್ದರು. ಇದಾದ ಬಳಿಕ ನಾಲ್ಕು ತಿಂಗಳ ನಂತರ ರೇವಣ್ಣ ಕೊಠಡಿಗೆ ಬರುವಂತೆ ಕರೆಯುತ್ತಿದ್ದರು ಎಂದು ಎಫ್​ಐಆರ್ ನಲ್ಲಿ ದಾಖಲಾಗಿದೆ.

ಮನೆಯಲ್ಲಿ ಆರು ಮಹಿಳೆಯರು ಕೆಲಸ ಮಾಡುತ್ತಿದ್ದು, ಪ್ರಜ್ವಲ್ ರೇವಣ್ಣ ಬಂದ್ರೆ ಭಯ ಆಗುತ್ತೆ ಎಂದು ಹೇಳುತ್ತಿದ್ದರು. ಇಷ್ಟು ಮಾತ್ರವಲ್ಲದೇ ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗರು ಮಹಿಳೆಯರಿಗೆ ಎಚ್ಚರವಾಗಿರುವಂತೆ ಸೂಚಿಸುತ್ತಿದ್ದರು. ಭವಾನಿ ಮನೆಯಲ್ಲಿ ಇಲ್ಲದಿದ್ದಾಗ ರೇವಣ್ಣ ಸ್ಟೋರ್​ ರೂಮ್​ನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು.

ಹಲವಾರು ಬಾರಿ ಲೈಂಗಿಕ ದೌರ್ಜನ್ಯ

ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು. ಸೀರೆಯ ಪಿನ್​ ಕಿತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಪ್ರಜ್ವಲ್ ರೇವಣ್ಣು ಅಡುಗೆ ಮನೆಗೆ ಹಿಂದಿನಿಂದ ಬಂದು ಮೈ ಮುಟ್ಟುತ್ತಾ ಹೊಟ್ಟೆ ಭಾಗದಲ್ಲಿ ಜಿಗುಟುತ್ತಿದ್ದರು. ಎಣ್ಣೆ ಹಚ್ಚಲು ಬರುವಂತೆ ಹೇಳುತ್ತಿದ್ದರು. ಹಲವಾರು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.

ನನ್ನ ಮಗಳಿಗೆ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದರು. ಮಗಳು ಹೆದರಿಕೊಂಡು ನಂಬರ್ ಬ್ಲಾಕ್ ಮಾಡಿದ್ದಳು. ಈ ದೌರ್ಜನ್ಯದಿಂದ ನೊಂದು ಮಹಿಳೆ ಪ್ರಜ್ವಲ್ ರೇವಣ್ಣ ಮನೆಯ ಕೆಲಸದಿಂದ ಹೊರ ಬಂದಿದ್ದಾರೆ.

ಎಸ್​ಐಟಿ ತಂಡ ರಚನೆ

ಪೆನ್ ಡ್ರೈವ್ ಪ್ರಕರಣ ಕುರಿತ ತನಿಖೆಗಾಗಿ ರಾಜ್ಯ ಸರ್ಕಾರ ಎಸ್​ಐಟಿ ತಂಡ (SIT Team) ರಚಿಸಿ ಆದೇಶಿ ಪ್ರಕಟಿಸಿದೆ. ಬಿಜಯ್ ಕುಮಾರ್ ಸಿಂಗ್, ಎಡಿಜಿಪಿ ಸಿಐಡಿ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಲಾಗಿದೆ. ಈ ಹಿನ್ನೆಲೆ ಪ್ರಕರಣದ ಸಮಗ್ರ ತನಿಖೆಕೈಗೊಳ್ಳಲು ತಾಂತ್ರಿಕ ಪರಿಣಿತಿ ಇರುವ ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ಒಂದು ವಿಶೇಷ ತನಿಖಾ ತಂಡವನ್ನು ಸರ್ಕಾರ ರಚನೆ ಮಾಡಿದೆ.

ವಿಶೇಷ ತನಿಖಾ ತಂಡದಲ್ಲಿರುವ ಅಧಿಕಾರಿಗಳು

1.ಬಿಜಯ ಕುಮಾರ್ ಸಿಂಗ್, ಐಪಿಎಸ್
ಪೊಲೀಸ್ ಮಹಾ ನಿರ್ದೇಶಕರು, ಸಿಐಡಿ, ಬೆಂಗಳೂರು

2.ಸುಮನ್ ಡಿ ಪೆನ್ನೇಕರ್, ಐಪಿಎಸ್
ಸಹಾಯಕ ಪೊಲೀಸ್​ ಮಹಾ ನಿರೀಕ್ಷಕರು
ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು

3.ಸೀಮಾ ಲಾಠ್ಕರ್, ಐಪಿಎಸ್​
ಪೊಲೀಸ್ ಅಧೀಕ್ಷಕರು, ಮೈಸೂರು

ವಿಶೇಷ ತನಿಖಾ ತಂಡ ರಚಿಸಬೇಕು ಹಾಗೂ ಆರೋಪಿಗಳ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿತ್ತು.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ