
ನಟ ಶರಣ್ (Sharan) ಅವರು ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರ ನಟನೆಯ ‘ಅವಾತರ ಪುರುಷ 2’ ಸಿನಿಮಾ ಮಾರ್ಚ್ 22ರಂದು ರಿಲೀಸ್ ಆಗಲಿದೆ ಎಂದು ಘೋಷಣೆ ಆಗಿದೆ. ಈ ಚಿತ್ರದಲ್ಲಿ ಮಾಟ ಮಂತ್ರದ ಬಗ್ಗೆ ಇದೆ. ಅದೇ ರೀತಿ, ಹಾರರ್ ಕಥೆ ಹೊಂದಿರುವ ‘ಛೂ ಮಂತರ್’ ಸಿನಿಮಾ ಕೂಡ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ರಿಲೀಸ್ ದಿನಾಂಕವನ್ನು ತಂಡ ತಿಳಿಸಿದೆ. ಏಪ್ರಿಲ್ 5ಕ್ಕೆ ಈ ಚಿತ್ರ ಬಿಡುಗಡೆ ಆಗಲಿದೆ.