Breaking News

ರಾಜ್ಯದಲ್ಲಿ ಇನ್ಮೇಲೆ ಕೆಎಂಎಫ್ ಎಮ್ಮೆ ಹಾಲು ಸಿಗಲ್ಲ! ಮೂರೇ ತಿಂಗಳಿಗೆ ಮಾರಾಟಕ್ಕೆ ಬ್ರೇಕ್ ಹಾಕಲು ಚಿಂತನೆ

Spread the love

ಬೆಂಗಳೂರು: ಕಳೆದ ಮೂರು ತಿಂಗಳ ಹಿಂದಷ್ಟೇ ಕರ್ನಾಟಕ ಹಾಲು ಒಕ್ಕೂಟ (Karnataka Milk Federation) ರಾಜ್ಯಾಧ್ಯಂತ ಎಮ್ಮೆ ಹಾಲು ಮಾರಾಟಕ್ಕೆ (Selling buffalo milk) ಚಾಲನೆ ನೀಡಿತ್ತು. ಆದರೆ ಇದಾದ ಮೂರೇ ತಿಂಗಳಿಗೆ ಎಮ್ಮೆ ಹಾಲು ಮಾರಾಟಕ್ಕೆ ಬ್ರೇಕ್​ ಹಾಕಲು ಕೆಎಂಎಫ್ (KMF)​ ಚಿಂತನೆ ನಡೆಸಿದೆಯಂತೆ.

ಹೌದು, ಕಳೆದ ವರ್ಷ ಡಿಸೆಂಬರ್ ತಿಂಗಳಿಂದ ಎಮ್ಮೆ ಹಾಲು ಮಾರುಕಟ್ಟೆಗೆ (Market) ಕೆಎಂಎಫ್​ ಬಿಡುಗಡೆ ಮಾಡಿತ್ತು, ಆದರೆ ಸದ್ಯ ಎಮ್ಮೆ ಹಾಲು ಮಾರಾಟ ಮತ್ತೆ ಸ್ಥಗಿತ ಮಾಡಲು ಕೆಎಂಎಫ್ ಗಂಭೀರ ಚಿಂತನೆ ನಡೆಸಿದೆಯಂತೆ.

 

ರಾಜ್ಯದಲ್ಲಿ ಎಮ್ಮೆ ಹಾಲಿಗೆ ಗ್ರಾಹಕರು ನಿರಾಸಕ್ತಿ

ಎಮ್ಮೆ ಹಾಲಿಗೆ ಗ್ರಾಹಕರಿಂದ ಬೇಡಿಕೆ ಕುಸಿತ ಆಗಿರುವುದು ಕೆಎಂಎಫ್​ ಚಿಂತನೆಗೆ ಕಾರಣ ಎನ್ನಲಾಗಿದೆ. ರಾಜ್ಯದಲ್ಲಿ ನಿತ್ಯ 2000 ಲೀಟರ್ ಮಾತ್ರ ಎಮ್ಮೆ ಹಾಲು ಮಾರಾಟ ಆಗುತ್ತಿದೆ. ಬೆಂಗಳೂರು, ಗೋವಾ, ಮಹಾರಾಷ್ಟ್ರ ಭಾಗಕ್ಕೆ ಎಮ್ಮೆ ಹಾಲು ಪೂರೈಕೆಯಾಗುತ್ತಿತ್ತು. ಕೆಎಂಎಫ್​​ ಪ್ರತಿ ಲೀಟರ್ ಗೆ 60 ರೂಪಾಯಿಯಂತೆ ಮಾರಾಟ ಮಾಡುತ್ತಿತ್ತು. ಆದರೆ ಇನ್ಮೇಲೆ ಎಮ್ಮೆ ಹಾಲು ಮಾರಾಟ ಮಾಡದಿರಲು ಕೆಎಂಎಫ್ ನಿರ್ಧಾರ ಮಾಡಿದೆ. ಈ ಬಗ್ಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ನ್ಯೂಸ್‌18ಗೆ ಮಾಹಿತಿ‌ ನೀಡಿದ್ದಾರೆ.

ಡಿಸೆಂಬರ್​​ನಲ್ಲಿ ಎಮ್ಮೆ ಹಾಲು ಮಾರಾಟಕ್ಕೆ ಮುಂದಾಗಿದ್ದ ಕೆಎಂಎಫ್​​ ಆರಂಭದಲ್ಲಿ ಅರ್ಧ ಲೀಟರ್ ಹಾಲಿನ ಪ್ಯಾಕೆಟ್​​​ಗಳನ್ನು ಬಿಡುಗಡೆ ಮಾಡಿತ್ತು. ಇದಕ್ಕೂ ಮುನ್ನ ಕೆಎಂಎಫ್​​ ಸುಮಾರು 4-5 ಸಾವಿರ ಲೀಟರ್ ಹಾಲನ್ನು ನಿತ್ಯ ಕೆಎಂಎಫ್​ ಮಾರಾಟ ಮಾಡುತ್ತಿತ್ತು. ರಾಜ್ಯದ ಎಲ್ಲಾ ಒಕ್ಕೂಟಗಳಲ್ಲಿ ಹಾಲು ಪೂರೈಸಲು ಸಾಕಷ್ಟು ಎಮ್ಮೆಗಳು ಇಲ್ಲದ ಕಾರಣ ವಿಜಯಪುರ ಹಾಗೂ ಬೆಳಗಾವಿ ರೈತರಿಂದ ಹಾಲು ಖರೀದಿ ಮಾಡಿ ರಾಜ್ಯದಾದ್ಯಂತ ಪೂರೈಕೆ ಮಾಡುತ್ತಿತ್ತು.

 


Spread the love

About Laxminews 24x7

Check Also

5 ತಾಲೂಕುಗಳ ಶಾಲೆಗೆ ಇಂದು ರಜೆ ಘೋಷಣೆ

Spread the loveಮಂಗಳೂರು/ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್​ 29(ಶುಕ್ರವಾರ) ರಂದು ಜಿಲ್ಲೆಯ ಶಾಲೆ, ಪ್ರೌಢಶಾಲೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ