Breaking News
Home / ರಾಜಕೀಯ / ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಲು ಅಸಲಿ ಕಾರಣ ಇಲ್ಲಿದೆ ನೋಡಿ!

ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಲು ಅಸಲಿ ಕಾರಣ ಇಲ್ಲಿದೆ ನೋಡಿ!

Spread the love

ಬಿಜೆಪಿ ಲೋಕಸಭಾ ಚುನಾವಣೆ 2024ರ ಕರ್ನಾಟಕದ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, ಮೊದಲೇ ಅಂದುಕೊಂಡಂತೆ ಹಲವು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ. ಅದರಲ್ಲೂ ಈ ಪಟ್ಟಿಯಲ್ಲಿ ಮೈಸೂರು & ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಈಗ, ಮಾಜಿ ಸಂಸದ ಆಗೋದು ಪಕ್ಕಾ ಆಗಿದೆ.

ತಮ್ಮದೇ ತಪ್ಪಿಗೆ ಬೆಲೆ ಕಟ್ಟಿದ ಸಿಂಹ?ಹೊರಗಡೆ ಈಗ ಓಡಾಡುತ್ತಿರುವ ವಿಚಾರ ಏನು ಅಂದ್ರೆ, ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಲು ಕಾರಣ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಹಾಗೂ ಕರ್ನಾಟಕದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಎಂಬ ಆರೋಪ ಓಡಾಡುತ್ತಿದೆ. ಆದರೆ ಅಸಲಿ ಕಥೆ ಇದಲ್ಲ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿದ್ದರ ಹಿಂದೆ ಸ್ವತಃ, ಸಿಂಹ ಮಾಡಿಕೊಂಡ ಸಾಲು ಸಾಲು ತಪ್ಪುಗಳು ಇವೆ.ಅದರಲ್ಲೂ ಮೈಸೂರು & ಕೊಡಗು ಕ್ಷೇತ್ರದ, ಸ್ಥಳೀಯ ಬಿಜೆಪಿ ಲೀಡರ್ಸ್ ಪ್ರತಾಪ್ ಸಿಂಹ ವಿರುದ್ಧವೆ ತಿರುಗಿಬಿದ್ದಿದ್ದಾರೆ ಎನ್ನುವ ಸುದ್ದಿ ಅಮಿತ್ ಶಾ ಅವರಿಗೆ ಕೂಡ, ಅಚ್ಚುಕಟ್ಟಾಗಿ ತಲುಪಿತ್ತು ಎನ್ನಲಾಗಿದೆ. ಹೀಗಾಗಿಯೇ ಪ್ರತಾಪ್ ಸಿಂಹಗೆ ಹೈಕಮಾಂಡ್ ಇದೀಗ ಮನೆ ದಾರಿ ತೋರಿಸಿದೆ.

ಹಾಗಾದರೆ ಮೈಸೂರು ರಾಜವಂಶಕ್ಕೆ ದಿಢೀರ್ ಟಿಕೆಟ್ ಕೊಟ್ಟಿದ್ದು ಯಾಕೆ..? ಇದರ ಹಿಂದಿನ ಉದ್ದೇಶ ಏನು? ಸಂಪೂರ್ನ ಮಾಹಿತಿಗೆ ಮುಂದೆ ಓದಿ. ಭರ್ಜರಿಯಾಗಿ ಗೆದ್ದಿದ್ದರು ಸಿಂಹ2014ರಲ್ಲಿ ಬರೋಬ್ಬರಿ 5,03,908 ಮತ ಪಡೆದಿದ್ದ ಪ್ರತಾಪ್ ಸಿಂಹ ಅವರು, ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು.

ಆಗ ಇವರ ಎದುರು ನಿಂತಿದ್ದ ಎಚ್. ವಿಶ್ವನಾಥ್, 4,72,300 ಮತ ಪಡೆದಿದ್ದರು. 2019ರಲ್ಲಿ 6,88,974 ಮತ ಪಡೆದಿದ್ದರು ಪ್ರತಾಪ್ ಸಿಂಹ. ಆಗ ಎದುರಾಳಿ ಆಗಿದ್ದ ಸಿ.ಎಚ್. ವಿಜಯಶಂಕರ್ 5,50,327 ಮತಗಳ ಪಡೆದಿದ್ದರು.

ಇದೀಗ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದೆ.ಈ ಬಾರಿ ಕೂಡ ನಾನು ಗೆಲ್ಲುತ್ತಿದೆ ಎಂಬ ಹುಮ್ಮಸ್ಸಿನಲ್ಲಿ ಇದ್ದ, ಮಾಜಿ ಪತ್ರಕರ್ತ ಪ್ರತಾಪ್ ಸಿಂಹ ಅವರಿಗೆ ಹೈಕಮಾಂಡ್ ಕೈಕೊಟ್ಟಿದೆ.

ಈ ಮೂಲಕವಾಗಿ ಮೈಸೂರಿನ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ಕೊಟ್ಟಿದೆ ಬಿಜೆಪಿ ವರಿಷ್ಠರ ಪಡೆ. ಇಲ್ಲಿ ಸುಲಭವಾಗಿ ಮೈಸೂರು ಕ್ಷೇತ್ರವನ್ನು ಗೆಲ್ಲುವ ತಂತ್ರವೂ ಇದೆ, ಹಾಗೇ ಇದರ ಜೊತೆಗೆ ಕಾಂಗ್ರೆಸ್‌ಗೆ ಶಾಕ್ ಕೊಡುವ ರಣತಂತ್ರವೂ ಬಿಜೆಪಿ ನಾಯಕರದ್ದಾಗಿದೆ.

ಅಮಿತ್ ಶಾ ಚಾಣಕ್ಯ ನಡೆ?ಬಿಜೆಪಿ ಹೈಕಮಾಂಡ್ ನಾಯಕರು ಅದೆಷ್ಟು ಅಚ್ಚುಕಟ್ಟಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದ್ದಾರೆ ಎಂದರೆ, ಬೇರೆ ಪಕ್ಷಗಳು ಇದನ್ನ ನೋಡಿ ಕಲಿಯಬೇಕು.

ಆ ರೀತಿ ಗ್ರೌಂಡ್ ರಿಪೋರ್ಟ್ ತರಿಸಿಕೊಂಡಿದ್ದ ಬಿಜೆಪಿ ಹೈಕಮಾಂಡ್, ಮೈಸೂರು & ಕೊಡಗು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಮಾಡಿಕೊಂಡಿದ್ದ ಎಡವಟ್ಟು ಪಟ್ಟಿ ಮಾಡಿತ್ತು ಎನ್ನಲಾಗಿದೆ.ಹಾಗೇ ಮೈಸೂರಿನ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪರ ಉತ್ತರ ಭಾರತದ ಲಾಭಿ ಕೂಡ ವರ್ಕೌಟ್ ಮಾಡಿದ್ದು, ಇದೀಗ ಸುಲಭವಾಗಿ ಯದುವೀರ್ ಟಿಕೆಟ್ ಪಡೆದಿದ್ದಾರೆ.

ಟಿಕೆಟ್ ಪಡೆದಷ್ಟೇ ಸುಲಭವಾಗಿ ಗೆಲ್ಲುವ ನಿರೀಕ್ಷೆಯಲ್ಲಿಯೂ ಇದ್ದಾರೆ. ಹೀಗಿದ್ದಾಗ ಅಸಮಾಧಾನದ ಹೊಗೆ ಹೊರಗೆ ಬಾರದಂತೆಯೂ ಬಿಜೆಪಿ ವರಿಷ್ಠರು ರಣತಂತ್ರ ರೂಪಿಸಿರುವುದು 


Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ