ಯಾದಗಿರಿ: ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಭೀಮಾ ನದಿಯ ನೀರಿನ ಮೇಲೆ ಜಿಲ್ಲೆಯ ಜನ ಅವಲಂಬಿತರಾಗಿದ್ದಾರೆ. ಆದರೆ, ಕುಡಿಯಲು ನೀರಿಲ್ಲದ ಸಮಯದಲ್ಲಿ ಆಂಧ್ರ ಮೂಲದ ರೈತರು ಭತ್ತದ ಬೆಳೆಗೆ ನೀರು ಹರಿಸಿಕೊಳ್ಳುತ್ತಿದ್ದಾರೆ
ಬೆಳೆಗೆ ನೀರುಣಿಸಿ ಕುಡಿಯಲು ನೀರು ಸಿಗದ ಹಾಗೆ ಮಾಡುತ್ತಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯಾದಗಿರಿ, ಗುರುಮಠಕಲ್ ಜನರಿಗೆ ಕುಡಿಯಲು ಭೀಮಾ ನದಿ ನೀರೆ ಆಸರೆಯಾಗಿದೆ. ಆದರೆ, ಕುಡಿಯಲು ಬಳಸುವ ನೀರನ್ನೇ ಆಂಧ್ರ ರೈತರು ಭತ್ತದ ಬೆಳೆಗೆ ನೀರು ಹರಿಸಿಕೊಳ್ಳುತ್ತಿದ್ದು, ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.
ನದಿಯಲ್ಲಿ ನೀರು ಖಾಲಿಯಾದರೆ ಜಿಲ್ಲೆಯ ಜನ ಜೀವ ಜಲಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗ ಬೇಸಿಗೆ ಆರಂಭವಾಗಿದ್ದರಿಂದ ಯಾದಗಿರಿ ನಗರದಲ್ಲಿ ವಾರದಲ್ಲಿ ಮೂರು ಬಾರಿ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ಕೆಲ ಹಳ್ಳಿಗಳಲ್ಲಿ ನಿರೀಗಾಗಿ ಪರದಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ. ಇದು ಬೇಸಿಗೆ ಆರಂಭದ ಸ್ಥಿತಿಯಾದರೆ ಇನ್ನೂ ನಾಲ್ಕು ತಿಂಗಳು ಕಾಲ ಬೇಸಿಗೆ ಎದುರಿಸಬೇಕಾಗಿದೆ. ಮುಂದೆ ಹನಿ ನೀರಿಗೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ.