ನವದೆಹಲಿ : ಕೇಂದ್ರ ಬಿಜೆಪಿ (BJP) ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪಾದಯಾತ್ರೆ (Farmers protest) ಬುಧವಾರದಿಂದ ತೀವ್ರಸ್ವರೂಪ ಪಡೆಯುವ ಸಾಧ್ಯತೆಯಿದೆ. ಪಂಜಾಬ್ – ಹರಿಯಾಣಾ ಗಡಿಯಲ್ಲಿ (Punjab-Haryana border) 14,000 ಕ್ಕೂ ಹೆಚ್ಚು ಮಂದಿ ರೈತರು ಇಂದು ಒಗ್ಗೂಡುತ್ತಿದ್ದಾರೆ.
ಜೊತೆಗೆ 1200 ಟ್ರಾಕ್ಟರ್ ಟ್ರಾಲಿಗಳು, 300 ಕಾರ್ ಗಳು ಹಾಗೂ 10 ಮಿನಿ ಬಸ್ ಗಳೂ ಸಹ ಇಂದು ದೆಹಲಿ ಚಲೋ(Delhi Chalo) ಯಾತ್ರೆಗೆ ಸಜ್ಜಾಗಿವೆ.
ಪ್ರತಿಯೊಂದು ಬೆಳೆಗೂ ಕನಿಷ್ಠ ಬೆಂಬಲ ಬೆಲೆ ನೀಡಬೇಕೆನ್ನುವುದು ರೈತರ ಪ್ರಮುಖ ಬೇಡಿಕೆಯಾಗಿದೆ.
ಇದೇ ವೇಳೆ, ಹರ್ಯಾಣಾ ಸರ್ಕಾರವು ಇಂಟರ್ನೆಟ್ ಮೇಲಿನ ನಿರ್ಬಂಧವನ್ನು ಮುಂದುವರೆಸಿದೆ. ಜೊತೆಗೆ ಸಮೂಹ ಸಂದೇಶ ಪ್ರಸಾರಕ್ಕೂ (Bulk SMS) ಕಡಿವಾಣ ಹಾಕಿದೆ. ಅಂಬಾಲಾ, ಕುರುಕ್ಷೇತ್ರ, ಕೈಥಾಲ್, ಜಿಂದ್, ಹಿಸಾರ್, ಫತೇಹಾಬಾದ್, ಸಿರಸಾ ಜಿಲ್ಲೆಗಳಲ್ಲಿ ಈ ನಿರ್ಬಂಧ ಜಾರಿಯಾಗಿದೆ.
ದೆಹಲಿ ಚಲೋ ಯಾತ್ರೆಯ ಸಮಯದಲ್ಲಿ ಯಾವುದೇ ಅನಾಹುತ, ದೊಂಬಿ-ಗಲಭೆಗಳು ಸಂಭವಿಸಿದಂತೆ ಸೂಕ್ತ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.