Breaking News

ಹುಬ್ಬಳ್ಳಿ-ಧಾರವಾಡ ಮಂದಿ ಪಾಲಿಕೆಗೆ ಅತಿ ಹೆಚ್ಚು ತೆರಿಗೆ ಕಟ್ಟಿ, ದಾಖಲೆ ಮಾಡಿದ್ದಾರೆ!

Spread the love

ರಾಜ್ಯದಲ್ಲಿಯೇ ಅತಿ ದೊಡ್ಡ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರ 108.50 ಕೋಟಿ ರೂ ಕರ ಸಂಗ್ರಹಿಸಿದೆ. ಇನ್ನೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಮಳಿಗೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.
ಈ ಆರ್ಥಿಕ ವರ್ಷ ಮುಕ್ತಾಯವಾಗಲು ಇನ್ನೂ ಒಂದೂವರೆ ತಿಂಗಳಷ್ಟೇ ಬಾಕಿ ಇದೆ. ಜನ ಮತ್ತಷ್ಟು ಸ್ಪಂದಿಸಿದರೆ, ಪಾಲಿಕೆ ಗರಿಷ್ಠ ಗುರಿ ತಲುಪಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಅಧಿಕಾರಿಗಳು.

ಹುಬ್ಬಳ್ಳಿ-ಧಾರವಾಡ ಮಂದಿ ಪಾಲಿಕೆಗೆ ಅತಿ ಹೆಚ್ಚು ತೆರಿಗೆ ಕಟ್ಟಿ, ದಾಖಲೆ ಮಾಡಿದ್ದಾರೆ! ಏನಿದರ ಲೆಕ್ಕಾಚಾರ?

ಯಾವುದೇ ದೇಶ, ರಾಜ್ಯ ಅಥವಾ ನಗರ ಅಭಿವೃದ್ಧಿಯಾಗಬೇಕೆಂದರೆ ಅದಕ್ಕೆ ಹಣ ಬೇಕು. ಈ ಹಣವನ್ನು ಜನರು ಸರಿಯಾಗಿ ತೆರಿಗೆ ಕಟ್ಟೋ ಮೂಲಕ ನೀಡಬೇಕಾಗುತ್ತದೆ. ಆದರೆ ಅನೇಕ ಕಡೆಗಳಲ್ಲಿ ಈ ತೆರಿಗೆ ತುಂಬಲು ಜನರು ಹಿಂದೇಟು ಹಾಕುತ್ತಾರೆ. ಆದರೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರು ಈ ಬಾರಿ ಅತಿ ಹೆಚ್ಚು ತೆರಿಗೆ ಕಟ್ಟಿ (highest tax), ದಾಖಲೆ ಮಾಡಿದ್ದಾರೆ. ಅಷ್ಟಕ್ಕೂ ಯಾವ ತೆರಿಗೆ ಅದು? ಅದು ಸಂಗ್ರಹವಾಗಿದ್ದಾದರೂ ಎಷ್ಟು? ಇಲ್ಲಿದೆ ನೋಡಿ… ಹುಬ್ಬಳ್ಳಿ-ಧಾರವಾಡ ರಾಜ್ಯದಲ್ಲಿಯೇ ಅತಿ ದೊಡ್ಡ ಮಹಾನಗರ ಪಾಲಿಕೆ (Hubballi-Dharwad Municipal Corporation) ಅನ್ನೋ ಖ್ಯಾತಿಯನ್ನು ಹೊಂದಿದೆ.

ಇಂಥ ಹೆಗ್ಗಳಿಕೆ ಜೊತೆಗೆ ಈ ಪಾಲಿಕೆಯು ಆಸ್ತಿ ತೆರಿಗೆ ಸಂಗ್ರಹದಲ್ಲಿ ಇದೇ ಮೊದಲ ಬಾರಿಗೆ ನೂರು ಕೋಟಿ ರೂಪಾಯಿಯ ಗಡಿ ದಾಟಿದೆ. ಪಾಲಿಕೆಯ 62 ವರ್ಷಗಳ ಇತಿಹಾಸದಲ್ಲಿ ಇದೊಂದು ಹೊಸ ಮೈಲಿಗಲ್ಲು. 2023-24ನೇ ಸಾಲಿನಲ್ಲಿ 135 ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಲಾಗಿದೆ.

ಇದೀಗ 2023ರ ಏಪ್ರಿಲ್ 1ರಿಂದ 2024ರ ಫೆಬ್ರವರಿ 16 ರವರೆಗೆ 108.50 ಕೋಟಿ ರೂಪಾಯಿ ಸಂಗ್ರಹಿಸಿದೆ. ಇನ್ನೂ ಒಂದೂವರೆ ತಿಂಗಳಲ್ಲಿ 27 ಕೋಟಿ ರೂಪಾಯಿ ಆಸ್ತಿ ಸಂಗ್ರಹಿಸಬೇಕಾದ ದೊಡ್ಡ ಸವಾಲು ಪಾಲಿಕೆಯ ಅಧಿಕಾರಿಗಳ ಮೇಲಿದೆ. ಈ ಪಾಲಿಕೆ ವ್ಯಾಪ್ತಿಯಲ್ಲಿ 1,80,450 13 ವಸತಿ, 33,732 ವಾಣಿಜ್ಯ ಹಾಗೂ 1,10,926 ಖಾಲಿ ಜಾಗ ಸೇರಿ 3,25,108 ಆಸ್ತಿಗಳಿವೆ. ಹು-ಧಾ ಮಹಾನಗರ ಪಾಲಿಕೆಗೆ ಅತಿ ದೊಡ್ಡ ಆದಾಯ ಮೂಲ ಆಸ್ತಿ ತೆರಿಗೆಯೇ ಆಗಿದೆ.


Spread the love

About Laxminews 24x7

Check Also

ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಪೇದೆ ಅಮಾನತು

Spread the love ಬೀದರ್ : ಡ್ಯೂಟಿಗೆ ತಡವಾಗಿ ಬಂದಿರುವುದನ್ನು ಪ್ರಶ್ನಿಸಿದ್ದ ಮಹಿಳಾ ಪಿಎಸ್‌ಐ ಮೇಲೆ ಪೊಲಿಸ್ ಪೇದೆಯೊಬ್ಬ ಹಲ್ಲೆ ಮಾಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ