ತುಮಕೂರು: ತುಮಕೂರಿನ ಸಿದ್ದಗಂಗಾ ಮಠಕ್ಕೆ ಕ್ರಿಕೆಟ್ ಟೀಂ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಕುಟುಂಬ ಸಮೇತ ಭೇಟಿ ಕೊಟ್ಟಿದ್ದಾರೆ.
ಡಾ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ರಾಹುಲ್, ಸಿದ್ದಗಂಗಾ ಮಠಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಗಳ ಆಶಿರ್ವಾದ ಪಡೆದಿದ್ದಾರೆ.

ತಂದೆ ಲೋಕೇಶ್, ತಾಯಿ ಲೋಕೇಶ್ವರಿ ಅವರೊಂದಿಗೆ ಕುಟುಂಬ ಸಮೇತರಾಗಿ ಕೆ.ಎಲ್ ರಾಹುಲ್ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ.
ರಾಹುಲ್ ತಂದೆ ಲೋಕೇಶ್ ಕೂಡ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಣ್ಣೂರು ಮೂಲದವರಾಗಿದ್ದು, ಸಿದ್ಧಗಂಗಾ ಮಠದ ಪರಮ ಭಕ್ತರಾಗಿದ್ದಾರೆ.
ಸಿದ್ಧಲಿಂಗ ಶ್ರೀಗಳು ಕ್ರಿಕೆಟ್ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ರಾಹುಲ್ ಪ್ರತಿಭೆಯನ್ನು ಪ್ರಶಂಸಿ ಇನ್ನು ಎತ್ತರಕ್ಕೆ ಬೆಳೆಯುವಂತೆ ಆಶಿರ್ವಾದ ಮಾಡಿದ್ದಾರೆ.
Laxmi News 24×7