ಬೆಂಗಳೂರು,): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಚ್ಚರಿ ಎಂಬಂತೆ ಕಾಂಗ್ರೆಸ್‌ಗೆ ಕೈಕೊಟ್ಟು ವಾಪಸ್ ಬಿಜೆಪಿಗೆ ಸೇರ್ಪಡೆಯಾಗಿದೆ. ಇದರ ಬೆನ್ನಲ್ಲೇ ಇದೀಗ ಲಕ್ಷ್ಮಣ ಸವದಿ ಅವರು ಸಹ ಬಿಜೆಪಿಗೆ ವಾಪಸ್ ಆಗುತ್ತಾರಾ ಎನ್ನುವ ಚರ್ಚೆಗಳು ನಡೆದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇನ್ನು ಇದೀಗ ಇದಕ್ಕೆ ಸ್ವತಃ ಲಕ್ಷ್ಮಣ ಸವಧಿ ಪ್ರತಿಕ್ರಿಯಿಸಿದ್ದು, ಮತ್ತೆ ಬಿಜೆಪಿ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ನಾನು ಮತ್ತೆ ಬಿಜೆಪಿಗೆ ಹೋಗಲ್ಲ. ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗಿದ್ದು ಏಕೆಂದು ಗೊತ್ತಿಲ್ಲ. ಶೆಟ್ಟರ್ ಬಿಜೆಪಿಗೆ ಹೋಗಿದ್ದರಿಂದ ಕಾಂಗ್ರೆಸ್‌ಗೆ ಡ್ಯಾಮೇಜ್ ಆಗಲ್ಲ. ರಾಷ್ಟ್ರೀಯ ಪಕ್ಷಗಳು ಎಂದೂ ಒಬ್ಬರ ಮೇಲೆ ಅವಲಂಬಿತವಾಗಿರಲ್ಲ. ಶೆಟ್ಟರ್ ರಾಜೀನಾಮೆ ನೀಡಿದ್ದು ವೈಯಕ್ತಿಕ, ಈ ಬಗ್ಗೆ ಮಾತನಾಡಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಅವರು ಕಾಂಗ್ರೆಸ್ ಬರುವಾಗ ಒಟ್ಟಿಗೆ ನಿರ್ಧಾರ ಮಾಡಿರಲಿಲ್ಲ. ನಾನು ಮೊದಲು ಕಾಂಗ್ರೆಸ್ ಸೇರ್ಪಡೆಯಾಗಿದ್ದು .ಆಮೇಲೆ ಅವರು ಕಾಂಗ್ರೆಸ್ ಗೆ ಬಂದಿದ್ದು. ಅವರಿಗೆ ಯಾವತ್ತು ಟಿಕೆಟ್ ನಿರಾಕರಣೆ ಆಯ್ತಲ್ಲ ಅವಾಗ ಅವರು ಬಂದಿದ್ದು. ಅದಕ್ಕಿಂತ ಮುಂಚೆ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದು. ನನ್ನದು ಮುಗಿದ ಮೇಲೆ ಅವರು ಬಂದಿದ್ದು. ಶೆಟ್ಟರ್ ಯಾಕೆ ಬಿಜೆಪಿಗೆ ಹೋದ್ರು ಅಂತ ಅವರನ್ನೇ ಕೇಳಬೇಕು ಎಂದು ಹೇಳಿದರು.ಅವರ ವಿಚಾರ ನಾನು ಉತ್ತರ ಕೊಡಲು ಹೇಗೆ ಸಾಧ್ಯ? ಯಾವ ಕಾರಣದಿಂದ ಬಂದರೂ ಯಾವ ಕಾರಣಕ್ಕೆ ಬಿಟ್ಟು ಹೋದರು ಅವರೇ ಉತ್ತರ ಕೊಡಬೇಕು.
ಬಿಜೆಪಿಯವರು ಸಂಪರ್ಕ ಮಾಡುವ ಪ್ರಶ್ನೆ ನನ್ನ ಮುಂದೆ ಬರಲ್ಲ . ನಾನು ಒಂದು ಸಲ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ನಲ್ಲಿ ಮುಂದುವರೆಯುತ್ತೇನೆ. ಕಾಂಗ್ರೆಸ್ ಬಿಡುವ ಪ್ರಶ್ನೆ ನನ್ನ ಮುಂದೆ ಬರುವುದಿಲ್ಲ . ಪ್ರತಿ ದಿನವೂ ಜಗದೀಶ್ ಶೆಟ್ಟರ್ ಮಾತಾಡುತ್ತಾರೆ. ಮಾತನಾಡುವುದಕ್ಕೇನು ಕೊರತೆ ಇಲ್ಲ . ನಾವು ಸ್ನೇಹಿತರು ಹಲವಾರು ವಿಚಾರ ಮಾತಾಡುತ್ತಿರುತ್ತೇವೆ ಕೇಳುತ್ತಿರುತ್ತೇವೆ. ಆದರೆ ಅವರವರ ಇಚ್ಛಾನುಸಾರ ರಾಜಕಾರಣ ಮಾಡ್ತಾ ಇರ್ತಾರೆ
ನಾನು ಅವರ ನಿರ್ಧಾರದ ಪರವು ಅಲ್ಲ ವಿರೋಧವೂ ಇಲ್ಲ ಎಮದು ಹೇಳಿದರು.