Breaking News

ಟಿಕೆಟ್‌ ಕೊಟ್ರೆ ಸೋಲು ಗ್ಯಾರಂಟಿ: ಮುದ್ದಹನುಮೇಗೌಡರರಿಗೆ ಪರೋಕ್ಷ ಎಚ್ಚರಿಕೆ ಕೊಟ್ಟ ಹಾಲಪ್ಪ

Spread the love

ತುಮಕೂರು: ಜನ ಸಾಮಾನ್ಯರ ಜೊತೆ ಒಡನಾಟ ಇರೋದು ಗೊತ್ತು. ತುಮಕೂರಿನಲ್ಲಿ ಸಭೆ ಮಾಡಿ ಜನರ ಕಷ್ಟ ಆಲಿಸೋದು ಗೊತ್ತು. ದೆಹಲಿಗೆ ಹೋಗೋದು, ಬಾಂಬೆಗೆ ಹೋಗೋದು, ಸೋಫಾ ಮೇಲೆ ಕುಳಿತು ಫೋಟೋ ಕ್ಲಿಕ್ ಮಾಡೋದು ನನಗೆ ಗೊತ್ತಿಲ್ಲ ಎಂದು ಲೋಕಸಭೆ ಟಿಕೆಟ್‌ ಆಕಾಂಕ್ಷಿ ಮುರುಳೀಧರ್ ಹಾಲಪ್ಪ ಅವರು ಕಾಂಗ್ರೆಸ್‌ ಸೇರಲು ತುದಿಗಾಲಿನಲ್ಲಿ ನಿಂತಿರುವ ಮುದ್ದಹನುಮೇಗೌಡರ ವಿರುದ್ಧ ಕಿಡಿ ಕಾರಿದ್ದಾರೆ.

 

ಕಾಂಗ್ರೆಸ್‌ ಸೇರಿ ಲೋಕಸಭೆ ಚುನಾವಣೆ ಕಣಕ್ಕಿಳಿಯಲು ಪ್ರಯತ್ನಿಸುತ್ತಿರುವ ಮುದ್ದಹನುಮೇಗೌಡರ ವಿರುದ್ಧ ಹರಿಹಾಯ್ದಿರುವ ಮುರುಳೀಧರ್, ಮುದ್ದಹನುಮೇಗೌಡರಿಗೆ ಟಿಕೆಟ್ ಕೊಟ್ಟರೆ ಹೇಗೆ ಸಪೋರ್ಟ್ ಮಾಡಲು ಆಗುತ್ತದಾ? ಅಮದು ಅಭ್ಯರ್ಥಿಗೆ ಟಿಕೆಟ್ ಕೊಡಬಾರದು ಎಂದು ಒಕ್ಕೊರಲಿನ ತೀರ್ಮಾನ ಆಗಿತ್ತು. ನಮ್ಮ ಪಕ್ಷ ಏನೂ‌ ಬರಡಾಗಿಲ್ಲ.ನಮ್ಮಲ್ಲೇ ಸಮರ್ಥರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುದ್ದಹನುಮೇಗೌಡರು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದಾರೆ. ಅವರೆಲ್ಲ ಈಗ ಸುಮ್ಮನಿರೋದಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ನವರೇ ಮುದ್ದಹನುಮೇಗೌಡರನ್ನು ಸೋಲಿಸುತ್ತಾರೆ ಎನ್ನುವ ಸಂದೇಶ ರವಾನಿಸಿದರು.

ಹಾಲಪ್ಪ ಆಪ್ತರ ಸಭೆ: ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ನತ್ತ ಮುಖ ಮಾಡುತ್ತಿದ್ದಂತೆ ವಿರೋಧ ಹೆಚ್ಚಿದ್ದು, ಡಾ. ಜಿ.ಪರಮೇಶ್ವರ್ ಆಪ್ತ ಹಾಗೂ ಲೋಕಸಭೆ ಚುನಾವಣೆಯ ಟಿಕೆಟ್‌ ಆಕಾಂಕ್ಷಿ ಮುರುಳೀಧರ್ ಹಾಲಪ್ಪರ ಬೆಂಬಲಿಗರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಾಜರಿದ್ದ ಮಾಜಿ ಶಾಸಕರುಗಳಾದ ಲಕ್ಕಪ್ಪ, ಎಚ್.ನಿಂಗಪ್ಪ, ಗಂಗಹನುಮಯ್ಯ ಅವರು ಆಮದು ವ್ಯಕ್ತಿಗಳನ್ನು ಕರೆದು ಟಿಕೆಟ್ ಕೊಡೋದು ಬೇಡ, ಮುರುಳೀಧರ್ ಹಾಲಪ್ಪಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ.


Spread the love

About Laxminews 24x7

Check Also

ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ

Spread the loveಮಂಗಳೂರು, ): ಪುತ್ತೂರು ಬಿಜೆಪಿ ಮುಖಂಡನ ಪುತ್ರನ (Puttur BJP leader Son )ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ