ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲೂಕಿನ ಮದನಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಸವರಾಜ ಕಳೆದ 34 ವರ್ಷದಿಂದ ತಪ್ಪದೇ ಹೊಸವರ್ಷ ಹಾಗೂ ಸಂಕ್ರಾಂತಿ ಹಬ್ಬದ ಶುಭಾಷಯವನ್ನು ಪತ್ರ ಬರೆಯುವ ಮೂಲಕ ತಿಳಿಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲೂಕಿನ ಮದನಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಸವರಾಜ ಕಳೆದ 34 ವರ್ಷದಿಂದ ತಪ್ಪದೇ ಹೊಸವರ್ಷ ಹಾಗೂ ಸಂಕ್ರಾಂತಿ ಹಬ್ಬದ ಶುಭಾಷಯವನ್ನು ಪತ್ರ ಬರೆಯುವ ಮೂಲಕ ತಿಳಿಸುತ್ತಿದ್ದಾರೆ.
ವಿವಿಧ ರಾಜ್ಯಗಳ ಮುಖ್ಯಂತ್ರಿಗಳು, ವಿವಿಧ ಮಠಾಧೀಶರು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್ಪಿ, ವಿವಿಧ ಇಲಾಖೆ ಅಧಿಕಾರಿಗಳಿಗೆ ಶುಭಾಷಯ ಪತ್ರ ಬರೆಯುತ್ತಿದ್ದಾರೆ.
ಬರೀ ವಿಐಪಿಗಳಿಗೆ ಮಾತ್ರವಲ್ಲದೇ ಬಂಧುಗಳು, ಮಿತ್ರರು, ಪರಿಚಿತರು, ಗಣ್ಯರು, ವಿವಿಧ ಕ್ಷೇತ್ರಗಳ ಪ್ರಮುಖರಿಗೆ ಪತ್ರದ ಮುಖೇನ ಶುಭಾಶಯ ತಿಳಿಸುತ್ತಿದ್ದಾರೆ.
ವಿಕಲಚೇತನರಾದ ಶಿಕ್ಷಕ ಬಸವರಾಜ 1989 ರಿಂದ ಪತ್ರ ಬರೆಯಲು ಆರಂಭಿಸಿದ್ದಾರೆ. ಆರಂಭದಲ್ಲಿ 100-200 ಜನರಿಗೆ ಬರೆಯುತ್ತಿದ್ದ ಪತ್ರ ಬರೆಯುತ್ತಿದ್ದರು.
ಈ ಪತ್ರಗಳ ಸಂಖ್ಯೆ ಇದೀಗ ಸುಮಾರು ಎರಡು ಸಾವಿರಕ್ಕೆ ತಲುಪಿದೆ.
2023 ರ ಹೊಸವರ್ಷದ ಶುಭಾಷಯ ಪತ್ರ ಬರೆದಿದ್ದ ಶಿಕ್ಷಕ ಬಸವರಾಜ್ ಅವರಿಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಗೋವಾ ಸಿಎಂ ಪ್ರಮೋದ್ ಸಾವಂತ್ ಮರು ಶುಭಾಷಯ ಪತ್ರ ಕಳಿಸಿದ್ದರು.
ಶಿಕ್ಷಕ ಬಸವರಾಜ ಈ ವರ್ಷ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಶುಭಾಷಯ ಪತ್ರ ಬರೆದಿದ್ದಾರೆ.
ಇದೊಂದು ಒಳ್ಳೆಯ ಹವ್ಯಾಸ, ಇದರಿಂದ ತಮಗೆ ಹೆಚ್ಚು ಖುಷಿ ಇದೆ. ಹೀಗೆ ಪತ್ರ ಬರೆಯಲು ತಂದೆ ಚಂದ್ರಶೇಖರ ಹಾಗೂ ತಮ್ಮ ದೊಡ್ಡಪ್ಪ ಪ್ರೇರಣೆ ಎಂದು ಶಿಕ್ಷಕ ಬಸವರಾಜ ಹೇಳಿದ್ದಾರೆ.