ವಿಜಯನಗರ (ಆಂಧ್ರಪ್ರದೇಶ): ರಾಜ್ಯದ ವಿಜಯನಗರ ಜಿಲ್ಲೆಯ ಕೊತ್ತವಲಸ ಮಂಡಲದ ಕಂಟಕಪಲ್ಲಿಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಕ್ರಾಸಿಂಗ್ ಸಂದರ್ಭದಲ್ಲಿ 2 ಪ್ಯಾಸೆಂಜರ್ ರೈಲು ಮುಖಾಮುಖಿ ಡಿಕ್ಕಿ ಹೊಡೆದಿವೆ.
ಹಳಿ ದಾಟುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, 6 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ಪರಿಣಾಮ ರಾಯಗಡ ಪ್ಯಾಸೆಂಜರ್ ರೈಲಿನ 3 ಬೋಗಿಗಳು ಹಳಿ ತಪ್ಪಿವೆ. ಇನ್ನು ವಿದ್ಯುತ್ ತಂತಿಗಳು ತುಂಡಾಗಿ ಬಿದ್ದು ಘಟನಾ ಸ್ಥಳದಲ್ಲಿ ಕತ್ತಲು ಆವರಿಸಿದೆ. ಸ್ಥಳಕ್ಕೆ ರೈಲ್ವೆ ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡಿಕ್ಕಿ ರಭಸಕ್ಕೆ ರೈಲಿನ ಬೋಗಿಗಳು ಒಂದರ ಮೇಲೊಂದರಂತೆ ಬಿದ್ದಿವೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಸಹಾಯವಾಣಿಗಳು: 0891 2746330, 0891 2744619
ಸಹಾಯವಾಣಿಗಳು: 81060 53051, 81060 53052, 8500041670, 8500041671
ರೈಲ್ವೆ ಸಹಾಯವಾಣಿಗಳು: 83003 83004, 85005 85006