Breaking News

ಕೆಎಎಸ್ ಅಧಿಕಾರಿ ಸುಧಾ ಪುರಾಣ – ಕಮೋಡ್‍ನಲ್ಲಿ ಕೀ ಬಿಸಾಡಿರೋ ಶಂಕೆ

Spread the love

ಬೆಂಗಳೂರು: ಕೆಎಎಸ್ ಅಧಿಕಾರಿ ಡಾ. ಸುಧಾ ಮನೆ ಮೇಲೆ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳು ಮನೆಯಲ್ಲಿ ಲಾಕರ್ ತೆರೆಯಲು ಹರಸಾಹಸ ಪಡುತ್ತಿದ್ದು, ಲಾಕರ್ ಕೀ ಗಳನ್ನು ಕಮೋಡ್ ನಲ್ಲಿ ಬಿಸಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಎಸಿಬಿ ಅಧಿಕಾರಿಗಳು ಬಂದ 20 ನಿಮಿಷ ಬಾಗಿಲು ತೆರಯದೇ ಇದ್ದ ಸುಧಾ, ರಂಪಾಟ ಮಾಡಿದ್ದರು. ಸ್ಥಳೀಯ ಪೊಲೀಸರನ್ನು ಕರೆಸುತ್ತೇವೆ, ಈ ವೇಳೆ ನಿಮಗೆ ಅವಮಾನ ಆಗುತ್ತೆ. ಆಗ ಇನ್ನೂ ದೊಡ್ಡ ಕಷ್ಟ ಎದುರಾಗುತ್ತೆ ಎಂದು ಅಧಿಕಾರಿಗಳು ಹೇಳಿದ ಬಳಿಕ ಸುಧಾ ಬಾಗಿಲು ತೆರೆದರು. ಇದಕ್ಕೂ ಮೊದಲು ಕೆಲವೊಂದು ಕೀ ಗಳನ್ನು ಕಮೋಡ್ ಅಲ್ಲಿ ಬಿಸಾಕಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಕೊಡಿಗೇಹಳ್ಳಿಯ ಡಾ, ಸುಧಾ ನಿವಾಸಕ್ಕೆ ದಾಳಿ ಮಾಡಿ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಶಾಕ್ ಆಗಿದೆ. ಸುಧಾ ಮನೆಯಲ್ಲಿ ಕೆ.ಜಿಗಟ್ಟಲೆ ಚಿನ್ನ ಹಾಗೂ ನಗದು ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ. ಪತ್ತೆಯಾಗಿರುವ ಚಿನ್ನಾಭರಣ ಎಷ್ಟು ಪ್ರಮಾಣದಲ್ಲಿದೆ ಎಂದು ಅಂದಾಜಿಸುವ ಸಲುವಾಗಿ ಅಕ್ಕಸಾಲಿಗರು ಸುಧಾ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇತ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುವುದನ್ನು ಮುಂದುವರಿಸಿದ್ದಾರೆ.

ಸುಧಾ ಕ್ರಿಯೇಷನ್ ಹೆಸರಲ್ಲಿ ಸುಧಾ ಪತಿ ಸಿನಿಮಾ ಮತ್ತು ಸಿರಿಯಲ್ ನಿರ್ಮಾಣ ಮಾಡುತ್ತಿದ್ದರು. ಪತ್ನಿಯ ಜೊತೆ ಪತಿಯದ್ದು ಹೈ ಪ್ರೊಪೈಲ್ ಜೀವನ ನಡೆಸುತ್ತಿದ್ದು, ಇತ್ತೀಚೆಗೆ ಪತಿ ಮಗನಿಗಾಗಿ ಸಿನಿಮಾ ಪ್ರೊಡ್ಯೂಸ್ ಮಾಡಿದ್ದರು. ಅಲ್ಲದೆ ಮಗ ಅರೂನ್ ನನ್ನು ಇಂಡಸ್ಟ್ರಿಗೆ ಪರಿಚಯಸಿದ್ದರು. ಬಾರ್ಕೂರಿನಲ್ಲಿ ಸುಧಾ ಪತಿಗೆ ಸೇರಿದ ಹಾರ್ಡ್ ವೇರ್ ಶಾಪ್ ಕೂಡ ಇದೆ. ಸುಧಾ ಅವರು 2017-2018 ರಲ್ಲಿ ಬಿಡಿಎ ಭೂಸ್ವಾದೀನ ಅಧಿಕಾರಿಯಾಗಿ ನೇಮಕವಾಗಿದ್ದರು. ಕಳೆದ ಎರಡು ವರ್ಷಗಳಲ್ಲಿ ದಾಖಲೆ ಮಟ್ಟದಲ್ಲಿ ಆಸ್ತಿ ಹೆಚ್ಚಾಗಿದ್ದು, ವಿಲ್ಲಾ ಕೂಡ ಖರೀದಿ ಮಾಡಿದ್ದಾರೆ. ಅಲ್ಲದೆ ಐಷಾರಾಮಿ ಕಾರುಗಳನ್ನ ಖರೀದಿ ಮಾಡಿದ್ದಾರೆ.


Spread the love

About Laxminews 24x7

Check Also

ದೇವೇಗೌಡರ ಆರೋಗ್ಯ ಚೇತರಿಕೆಗಾಗಿ 108 ತೆಂಗಿನಕಾಯಿ ಒಡೆದು ಹರಕೆ ಹೊತ್ತ ಜೆಡಿಎಸ್ ಕಾರ್ಯಕರ್ತರು

Spread the love ಚಿಕ್ಕಬಳ್ಳಾಪುರ: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ