Breaking News

ಸಂಸತ್ತಿನ ಕಾರ್ಯಗಳನ್ನು ಸೋನಿಯಾ ರಾಜಕೀಯಗೊಳಿಸ್ತಿದ್ದಾರೆ’

Spread the love

ನವದೆಹಲಿ :ಸಂಸತ್ತಿನ ಕಾರ್ಯವ್ಯಾಪ್ತಿಯಲ್ಲಿ ಸೋನಿಯಾ ಗಾಂಧಿ ರಾಜಕೀಯಯ ಬೆರೆಸಲು ಹೊರಟಿದ್ದಾರೆ. ಅವರು ಸಂಸತ್ತಿನ ವಿಶೇ‍ಷ ಅಧಿವೇಶನದಲ್ಲಿ ವಿವಾದಗಳಿಗೆ ಮುನ್ನುಡಿ ಬರೆಯಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರ ಕರೆದಿರುವ ವಿಶೇ‍ಷ ಅಧಿವೇಶನದ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬರೆದಿರುವ ಪತ್ರದ ಬಗ್ಗೆ ಬುಧವಾರ ಮಾತನಾಡಿರುವ ಅವರು, ಸೋನಿಯಾ ಅವರ ಪತ್ರವು ಕೇಂದ್ರದ ರಾಜಕೀಯದಲ್ಲಿ ಹೊಸ ವಿವಾದಗಳನ್ನು ಸೃಷ್ಟಿಸಿದೆ. ಸಂಸತ್ತಿನ ಅಧಿವೇಶನದ ಸಮಯದಲ್ಲಿ ಚರ್ಚೆಗೆ ಮಂಡನೆಯಾಗಬೇಕಿರುವ ಅಂಶಗಳ ಬಗ್ಗೆ ಅವರು ಪತ್ರ ಬರೆದಿದ್ದಾರೆ, ಆದರೆ ಇದು ಬೇಡದ ವಿವಾದಗಳಿಗೆ ಕಾರಣವಾಗಿದೆ ಎಂದು ಕಿಡಿ ಕಾರಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯ ದೇವಾಲಯವಾದ ಸಂಸತ್ತನ್ನು ರಾಜಕೀಯಗೊಳಿಸಲು ಸೋನಿಯಾ ಕಾದು ಕುಳಿತ್ತಿದ್ದಾರೆ. ಎಲ್ಲವೂ ಸರಿ ಇರುವ ಈ ಸಮಯದಲ್ಲಿ ಅನಗತ್ಯ ವಿವಾದಗಳಿಗರ ಆಸ್ಪದ ನೀಡುತ್ತಿರುವುದು ದುರದೃಷ್ಟಕರ!. ಸಂವಿಧಾನದ ಪ್ರಕಾರವೇ ಅಧಿವೇಶನ ನಡೆಯಲಿದೆ ಎಂಬುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

ಅಲ್ಲದೆ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದ ಸಂದರ್ಭದಲ್ಲಿಯೂ ಸಹ ಅವರು ಪತ್ರ ಬರೆದು ಸೂಚಿಸಿದ್ದ ಎಲ್ಲ ವಿಷಯಗಳ ಚರ್ಚೆಯನ್ನು ಆಗ ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಸತ್ತಾತ್ಮಕ ವಿಚಾರದಲ್ಲಿ ನಂಬಿಕೆ ಇಲ್ಲ ಎಂಬುದನ್ನು ದೇಶ ನೋಡುತ್ತಿದೆ, ಅಲ್ಲದೆ ಸಂಸದೀಯ ಕಾರ್ಯ ವೈಖರಿಯನ್ನು ಪ್ರಶ್ನಿಸುವುದೇ ಕಾಂಗ್ರೆಸ್‌ನ ಕಾಯಕವಾಗಿದೆ. ದೇಶವನ್ನು ಇಷ್ಟು ವರ್ಷ ಆಳಿದ ಪಕ್ಷಕ್ಕೆ ಈ ನಡೆ ಶೋಭೆ ತರುವುದಿಲ್ಲ ಎಂದು ಟೀಕಿಸಿದ್ದಾರೆ.
ಸಂಸತ್ ಅಧಿವೇಶನ ನಡೆಸುವುದು ಭಾರತ ಸರಕಾರದ ಸಾಂವಿಧಾನಿಕ ಹಕ್ಕು, ಅಧಿವೇಶನದಲ್ಲಿ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ನಮ್ಮ ಕೇಂದ್ರ ಸರಕಾರ ಸಿದ್ಧವಿದೆ. ಸಂಸತ್ತಿನ ಘನತೆ ಗೌರವ ಕಾಪಾಡಲು ಎಲ್ಲಾ ವಿಪಕ್ಷಗಳು ಸಹಕಾರ ನೀಡುತ್ತವೆ‌ ಎಂದು ಆಶಿಸುವುದಾಗಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ