ಸೇಂಟ್ ಪಾಲ್ಸ್ ಪಿಯು ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಫುಟ್ಬಾಲ್ ಮತ್ತು ಬಾಕ್ಸಿಂಗ್ ಪಂದ್ಯಾವಳಿಯನ್ನು ಡಿಡಿಪಿಯು ಪ್ರೊ.ಬಿ.ವೈ.ಹನ್ನೂರ ಉದ್ಘಾಟಿಸಿ ಮಾತುನಾಡಿದ ಅವರು ಪಂದ್ಯಾವಳಿಯಲ್ಲಿ ಭಾಗವಹಿಸುವ ಸಂಸ್ಥೆಗಳು ಕ್ರೀಡಾ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು ,
ಸೇಂಟ್ ಪಾಲ್ಸ್ ಪಿಯು ಕಾಲೇಜು ವೃತ್ತಿಪರವಾಗಿ ಮಾಡಿದ ವ್ಯವಸ್ಥೆಗಳನ್ನು ಡಿಡಿಪಿಯು ಪ್ರೊ.ಹನ್ನೂರು ಶ್ಲಾಘಿಸಿದರು. “ಇದೇ ಮೊದಲ ಬಾರಿಗೆ ನಾನು ಕಡಿಮೆ ಅವಧಿಯಲ್ಲಿ ಇಂತಹ ವಿಸ್ತಾರವಾದ ವ್ಯವಸ್ಥೆಗಳನ್ನು ಅನುಭವಿಸುತ್ತಿದ್ದೇನೆ” ಎಂದು ಹೇಳಿದರು.
ಇನ್ನೂ ಕಾರ್ಯಕ್ರಮಕ್ಕೆ ಹಿರಿಯ ಪತ್ರಕರ್ತ ಲೂಯಿಸ್ ರೋಡ್ರಿಗಸ್ ಅತಿಥಿಗಳಾಗಿ ಆಗಮಿಸಿದ್ದರು,
ಸೇಂಟ್ ಪಾಲ್ಸ್ ಸಮೂಹ ಸಂಸ್ಥೆಗಳ ನಿರ್ದೇಶಕ ಫಾ.ಸೈಮನ್ ಫೆರ್ನಾಂಡಿಸ್, ಪಿಯು ಕಾಲೇಜಿನ ನಿರ್ದೇಶಕ ಫಾ.ಸ್ಟೀವನ್ ಅಲ್ಮೇಡಾ, ಕಾಲೇಜಿನ ಪ್ರಾಂಶುಪಾಲೆ ಡಾ.ಪದ್ಮಿನಿ ರವೀಂದ್ರನ್, ಬೆಳಗಾವಿಯ ಡಿವೈ ತಹಶೀಲ್ದಾರ್ ಪಿ ಸಂತೋಷ್, ಪಿಯು ವಿಭಾಗದ ಸಂಯೋಜಕ ಶ್ರೀಧರ ಹಿರೇಮಠ ಉಪಸ್ಥಿತರಿದ್ದರು.