Breaking News

ದಮ್ಮು, ತಾಕತ್ತು ಧೈರ್ಯದ ಬಗ್ಗೆ ಮಾತಾಡ್ತರೆ. ಅಷ್ಟೊಂದು ಮಾತಾಡೋರು ಯಾಕ್ರಿ ಸೋತ್ರಿ :ವೀರಪ್ಪ ಮೊಯ್ಲಿ

Spread the love

ಚಿಕ್ಕಬಳ್ಳಾಪುರ: ದಮ್ಮು‌ ತಾಕತ್ ಬಗ್ಗೆ ಮಾತನಾಡುವ ಬಿಜೆಪಿ ನಾಯಕರಿಗೆ ತಡವಾಗಿ ಆದರೂ ಬುದ್ಧಿ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ನಗರದ ತಮ್ಮ ಗೃಹ ಕಚೇರಿಯಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ತಮ್ಮೇಗೌಡರನ್ನ ಪಕ್ಷಕ್ಕೆ ಸೇರ್ಪಡೆ ಹಾಗು ಕಾರ್ಯಕರ್ತರ ಸಭೆ ಹಮ್ಮಿಕೊಂಡಿದ್ದರು. ಇದೇ ವೇಳೆ ಮಾತನಾಡಿದ ವೀರಪ್ಪ ಮೊಯ್ಲಿ, ಕಾಂಗ್ರೆಸ್​ ಮುಖಂಡರಿಂದ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದೆ ಎನ್ನುವುದು ಈಗಲಾದರೂ ಬಿಜೆಪಿಗೆ ಅರಿವಾಗಿದೆಯಾ?. ದಮ್ಮು ತಾಕತ್ತು ದೈರ್ಯದ ಬಗ್ಗೆ ಮಾತನಾಡೋ ಬಿಜೆಪಿ ಮುಖಂಡರಿಗೆ ಈಗಲಾದ್ರು ಬುದ್ಧಿ ಬಂದಂತಾಗಿದೆ. ಜಾತ್ಯತೀತ ರಾಜ್ಯದಲ್ಲಿ ಕೋಮುವಾದಿಗಳ ಆಟ ನಡೆಯೋದಿಲ್ಲ ಅನ್ನೋದಕ್ಕೆ ಮೊನ್ನೆ ಬಂದ ಫಲಿತಾಂಶವೇ ಸಾಕ್ಷಿಯಾಗಿದೆ. ಮುಂಬರುವ ಲೋಕಸಭೆ, ತಾಲೂಕು ಮತ್ತು ಜಿಲ್ಲಾ ಪಂಚಾಯತ್​ ಚುನಾವಣೆಯಲ್ಲೂ ಕಾಂಗ್ರೆಸ್​ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯದಲ್ಲಿ ಸೋತು ಸುಣ್ಣವಾಗಿದೆ: ಬಿಜೆಪಿ ಮಾಜಿ ಸಚಿವ ಕೆ ಎಸ್​ ಈಶ್ವರಪ್ಪಗೆ ಈಗ ಜ್ಞಾನೋದಯ ಆದಂತೆ ಇದೆ. ಕಾಂಗ್ರೆಸ್​ ಪಕ್ಷದಿಂದ ಬಿಜೆಪಿಗೆ ಹೋದ ಮುಖಂಡರಿಂದಲೇ ಬಿಜೆಪಿ ರಾಜ್ಯದಲ್ಲಿ ಸೋತು ಸುಣ್ಣವಾಗಿದೆ. ಅವರಲ್ಲಿ ಶಿಸ್ತಿಲ್ಲ. ಆಪರೇಷನ್ ಕಮಲವೇ ತಮ್ಮ ಸೋಲಿಗೆ ಕಾರಣ ಎಂದು ಹೇಳಿಕೊಂಡಿದ್ದಾರೆ. ಅದು ನಿಜವೇ?. ಅವರನ್ನ ಸೇರಿಸಿಕೊಳ್ಳುವ ಮೊದಲು ಈ ಬುದ್ಧಿ ನಿಮಗಿರಬೇಕಿತ್ತು. ಇಷ್ಟಾದರೂ ನಿಮ್ಮ ಮುಖಂಡರು ದಮ್ಮು, ತಾಕತ್ತು ಧೈರ್ಯದ ಬಗ್ಗೆ ಮಾತಾಡ್ತರೆ. ಅಷ್ಟೊಂದು ಮಾತಾಡೋರು ಯಾಕ್ರಿ ಸೋತ್ರಿ ಎಂದು ಮೊಯ್ಲಿ ಕುಟುಕಿದರು.


Spread the love

About Laxminews 24x7

Check Also

ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತ!!!

Spread the love ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತ!!! ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಖಾನಾಪೂರ ತಾಲೂಕಿನ ಅನಮೋಡ್ ಘಾಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ