ಭಾರತೀಯ ಅಂಚೆ ಕಚೇರಿಯಲ್ಲಿರುವ ಎಟಿಎಂನಲ್ಲಿ ಕಳ್ಳತನವಾಗಿರುವ ಘಟನೆ ವಿಜಯಪುರ ನಗರದ ಬಸವೇಶ್ವರ ಸರ್ಕಲ್ ಬಳಿಯಲ್ಲಿ ನಡೆದಿದೆ.
ಎಟಿಎಂನಲ್ಲಿರುವ ಎಷ್ಟು ಹಣ ಕಳ್ಳತನ ಆಗಿದೆ ಎನ್ನುವುದು ಮಾಹಿತಿ ಸಿಕ್ಕಿಲ್ಲ. ಆದ್ರೇ, ಭಾರತೀಯ ಅಂಚೆಯ ಎಟಿಎಂ ಒಡೆದು ಕಳ್ಳರು ಕಳ್ಳತನಗೈದು ಎಸ್ಕೇಪ್ ಆಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.