Breaking News

‘ಮೋದಿ ಬ್ಯಾನರ್’ ಹಾಕಿದವರೇ ಕಿತ್ತೆಸೆಯುತ್ತಿದ್ದಾರೆ, ಇದಲ್ಲವೇ ‘ಅಚ್ಛೆ ದಿನ್’: ‘ಟ್ವಿಟ್’ನಲ್ಲಿ ‘ಕಾಂಗ್ರೆಸ್’ ಕುಟುಕು

Spread the love

ಬೆಂಗಳೂರು: ಮೋದಿ ಬ್ಯಾನರ್ ( Modi Banner ) ಹಾಕಿದವರೇ ಮೋದಿಯನ್ನು ಕಿತ್ತೆಸೆಯುತ್ತಿದ್ದಾರೆ. ಇದಲ್ಲವೇ ಅಚ್ಛೆ ದಿನ್, ಇದಲ್ಲವೇ ಅಮೃತಕಾಲ್ ಬಿಜೆಪಿ ? ಮೋದಿ ಮುಖ ನೋಡಿ ಮತ ಕೊಡಿ ಎನ್ನುವ ಕಾಲ ಹೋಗಿದೆ, ಬಿಜೆಪಿ ಕಾರ್ಯಕರ್ತರಿಗೆ ( BJP Worker ) ಈಗ ಮೋದಿಯೇ ಅಪಥ್ಯ!

ಕಾಲಚಕ್ರ ತಿರುಗುತ್ತದೆ, ತಲೆ ಮೇಲೆ ಬಿದ್ದ ನೀರು ಕಾಲಬುಡಕ್ಕೆ ಬರಲೇಬೇಕು ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ), ಬಿಜೆಪಿಯನ್ನು ಕುಟುಕಿದೆ.

 

 

ಈ ಕುರಿತಂತೆ ಇಂದು ಟ್ವಿಟ್ ( Twitter ) ಮಾಡಿದ್ದು, ಹಾಲಿ ಶಾಸಕರರಿಗೆ ಟಿಕೆಟ್ ನೀಡದೆ ಕೈಬಿಟ್ಟಿರುವ ಬಿಜೆಪಿ ಅದಕ್ಕೆ ಯಾವ ಕಾರಣ ನೀಡುತ್ತದೆ. ಟಿಕೆಟ್ ನೀಡದಿರುವುದಕ್ಕೆ ಅಸಾಮರ್ಥ್ಯವೇ ಕಾರಣವಾದರೆ ಮೊದಲನೆಯದಾಗಿ ಸಿಎಂ ಬೊಮ್ಮಾಯಿಯವರನ್ನೇ ಕೈಬಿಡಬೇಕಿತ್ತು. ಜೊತೆಗೆ ಸಾಲು ಸಾಲು ಅಸಮರ್ಥ ಸಚಿವರಿದ್ದಾರೆ. ಅವರೆಲ್ಲರನ್ನೂ ಕೈಬಿಡಬೇಕಿತ್ತು. ಟಿಕೆಟ್ ವಂಚನೆಗೆ ಕಾರಣವೇನು ಬಿಜೆಪಿ ಎಂದು ಪ್ರಶ್ನಿಸಿದೆ.

 

 

ಆಜಾನ್ ಕೇಳಿದರೆ ಕಿರಿಕಿರಿಯಾಗುತ್ತದೆ ಎಂದವರು, ಹಲಾಲ್ ಬೇಡ ಜಟ್ಕಾ ಬೇಕು ಎಂದವರು, ಮುಸ್ಲಿಂರು ವ್ಯಾಪಾರ ಮಾಡಬಾರದು ಎಂದವರು, ಸದಾ ಮುಸ್ಲಿಂ ದ್ವೇಷ ಕಾರುತ್ತಿರುವವರು. ಇಂತಹ ಬಿಜೆಪಿಗರನ್ನು ಈಗ ಬೇರೆಲ್ಲೂ ಹುಡುಕುವುದು ಬೇಡ, ಮಸೀದಿಯೊಳಗೆ ಇಣುಕಿದರೆ ಕಾಣುತ್ತಾರೆ! ಬಿಜೆಪಿ ಶಾಸಕ ಉದಯ್ ಗರುಡಾಚಾರ್, ಸಚಿವ ಸುಧಾಕರ್ ಇದಕ್ಕೆ ಉದಾಹರಣೆ ಎಂದು ಟಾಂಗ್ ನೀಡಿದೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ