Breaking News

ಚರಂಡಿ ಯಾವಾಗ ಮಾಡಿಸ್ತೀರಾ ಶಾಸಕರೇ? ದಿಗ್ಬಂಧನ ಹಾಕಿ ತರಾಟೆಗೆ ತೆಗೆದುಕೊಂಡ ಮಹಿಳೆಯರು!

Spread the love

ದಗ: ಈ ನಾರಿಮಣಿಯರು, ಶಾಸಕರಿಗೆ ತಕ್ಕ ಪಾಠ ಕಲಿಸಿದ್ದು ಭೂಮಿ ಪೂಜೆಗೆ ಬಂದವರನ್ನು ಸುತ್ತುವರೆದು ತರಾಟೆಗೆ ತೆಗೆದುಕೊಂಡರು. ಈ ಅಪರೂಪದ ಘಟನೆ ನಡೆದದ್ದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹಳ್ಳದ ಕೇರಿ ಮತ್ತು ಕರೆ ಗೋರಿ ಆಶ್ರಯ ಪ್ಲಾಟ್​ನಲ್ಲಿ.

 

ಲಕ್ಷ್ಮೇಶ್ವರ ಪಟ್ಟಣದ ಹಳ್ಳದ ಕೇರಿ ಮತ್ತು ಕೆರೆ ಗೋರಿ ಆಶ್ರಯ ಪ್ಲಾಟ್​ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಮಾಡಲು ಶಾಸಕರಾದ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಆಗಮಿಸಿದ್ದರು. ಈ ಸಂದರ್ಭ ಸ್ಥಳೀಯ ಮಹಿಳೆಯರು ಜತೆಗೂಡಿದ್ದು ಮೊದಲು ಚರಂಡಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ.

ಅಲ್ಲಿಂದ ಕಾಲ್ಕೀಳುವ ಲಕ್ಷಣ ಕಾಣಿಸಿಕೊಂಡಿದ್ದೇ ಶಾಸಕರನ್ನು ಅವರು ಸುತ್ತುವರದು ದಿಗ್ಬಂಧನ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಶಾಸಕರು ಮಹಿಳೆಯರ ಮಾತಿನಂತೆಯೆ ವರಸೆ ಬದಲಾಯಿಸಿದ್ದು ಮೊದಲಿಗೆ ಚರಂಡಿ ಮಾಡಿ ನಂತರವೇ ರಸ್ತೆ ಮಾಡುವುದಾಗಿ ಹೇಳಿದ್ದಾರೆ.

ಈ ಸಂದರ್ಭ ಮಹಿಳೆಯರು ಹಾಗೂ ಸ್ಥಳೀಯರ ಮಾತಿಗೆ ಉತ್ತರ ನೀಡದೆ ಶಾಸಕರು ಕಾಲ್ಕಿತ್ತಿದ್ದಾರೆ. ಈ ಹಿಂದೆ ಚರಂಡಿ ಮಾಡುವಂತೆ ಹತ್ತಾರು ಬಾರಿ ಸ್ಥಳೀಯರು ಮನವಿ ಮಾಡಿದ್ದರು. ಆದರೆ ಈ ಬಾರಿ ಸ್ಥಳಕ್ಕೇ ಶಾಸಕರು ಬಂದಿದ್ದು ಈ ವಿಚಾರವಾಗಿ ಬಿಡಬಾರದು ಎಂದುಕೊಂಡ ಸ್ಥಳೀಯರು ಶಾಸಕರಿಗೆ ಚರಂಡಿ ಮಾಡಿಸಲು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಸಮೀಪ ಬರ್ತಾ ಇದ್ದಂತೆ ಭೂಮಿ ಪೂಜೆ ಮಾಡಲು ಬಂದ ಶಾಸಕರಿಗೆ ಸ್ಥಳೀಯರು ಹಾಗೂ ಅಲ್ಲಿನ ಮಹಿಳೆಯರು ಪಾಠ ಕಲಿಸಿದ್ದಾರೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ