ಹಂದಿಗುಂದ: ‘ಪ್ರತಿಯೊಬ್ಬರೂ ಹೆತ್ತ ತಂದೆ- ತಾಯಿಗಳನ್ನು ಗೌರವಿಸಬೇಕು. ತಂದೆ ತಾಯಿಗಳು ಮೊದಲ ಗುರುಗಳಾದರೆ ವಿದ್ಯೆ ಕಲಿಸುವ ಗುರುಗಳು ಪೂಜ್ಯನೀಯರು’ ಎಂದು ಮುಗಳಖೋಡ ಈಶ್ವರಲಿಂಗೇಶ್ವರ ದೇವಸ್ಥಾನ ಹಿರೇಮಠದ ಪ್ರಧಾನ ಅರ್ಚಕ ಸಚಿನ ಶಾಸ್ತ್ರಿ ಹೇಳಿದರು.
ಇಲ್ಲಿನ ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯ ವಿದ್ಯಾರ್ಥಿಗಳಿಂದ ಪಾಲಕರ ಪಾದಪೂಜೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಮಕ್ಕಳು ಪರೀಕ್ಷೆಗಳನ್ನು ಧೈರ್ಯದಿಂದ ಬರೆಯಬೇಕು. ಮೊಬೈಲ್ ದೂರವಿಟ್ಟು ಅಕ್ಷರಭ್ಯಾಸದ ಜೊತೆಗೆ ಸಂಸ್ಕಾರವಂತ ಜೀವನ ಕಲಿಯಬೇಕು’ ಎಂದರು.
ಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ ಖಾನಗೌಡ, ಮಹಾಲಕ್ಷ್ಮಿ ಬ್ಯಾಂಕಿನ ನಿರ್ದೇಶಕ ಮುರಗೆಪ್ಪ ಅಂದಾನಿ, ಪರಮಾನಂದ ಉಳ್ಳಾಗಡ್ಡಿ, ಪರಪ್ಪ ಸುಳ್ಳನವರ, ಮುಖ್ಯ ಶಿಕ್ಷಕ ನಾರಾಯಣ ಜಾಧವ, ರಾಮಕೃಷ್ಣ ಬನಾಜ, ಸಿ.ಎಸ್. ಹಿರೇಮಠ, ಶಾಂತಕುಮಾರ ಬೆಳ್ಳಿಕಟ್ಟಿ ಹಲವರು ಇದ್ದರು. ಶಿಕ್ಷಕ ಯಲ್ಲಪ್ಪ ಜಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು