ಬೆಳಗಾವಿ: ಕ್ಷೀರಭಾಗ್ಯದ ಹಾಲಿನ ಪೌಡರ್ನ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವೊಂದನ್ನು ಜಿಲ್ಲೆಯ ಬೈಲಹೊಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ. ಹಾಲಿನ ಪೌಡರ್ನ ಮುಂಬೈನ ಕಾಳಸಂತೆಯಲ್ಲಿ ಮಾರಾಟಕ್ಕೆ ಅಕ್ರಮ ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಜಿಲ್ಲೆಯ ಹೊಸಕುರಗುಂದ ಗ್ರಾಮದ ಬಳಿ ‘ಕ್ಷೀರಭಾಗ್ಯ’ದ ನಂದಿನಿ ಹಾಲಿನ ಪುಡಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕ್ಯಾಂಟರ್ ವಾಹನವನ್ನು ಜಪ್ತಿ ಮಾಡಲಾಗಿದೆ. ವಾಹನದಲ್ಲಿದ್ದ 25 ಕೆ.ಜಿ ತೂಕದ 240ಕ್ಕೂ ಹೆಚ್ಚು ಹಾಲಿನ ಪೌಡರ್ ಚೀಲಗಳನ್ನ ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಲಾದ ಹಾಲಿನ ಪುಡಿಯ ಒಟ್ಟು ಮೌಲ್ಯ 14 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಹಾಲಿನ ಪುಡಿಯನ್ನು ಧಾರವಾಡದಿಂದ ಮುಂಬೈಗೆ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ವಾಹನದ ಜೊತೆಗೆ ಚಾಲಕನನ್ನು ಸಹ ವಶಕ್ಕೆ ಪಡೆದಯಲಾಗಿದೆ.
Laxmi News 24×7