ನಾಗರಮುನ್ನೋಳಿ: ಸಮೀಪದ ಉಮರಾಣಿ ಗ್ರಾಮದ ಹೊರವಲಯದಲ್ಲಿ ನಿಪ್ಪಾಣಿ- ಮುಧೋಳ ರಸ್ತೆಯಲ್ಲಿ ತಮ್ಮನೇ ಅಣ್ಣನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಚಿಕ್ಕೋಡಿ ಪಟ್ಟಣದ ಡಂಬಳ ಕಾಲೊನಿ ನಿವಾಸಿ ಅಕ್ಬರ್ ಅಬ್ದುಲ್ ಶೇಖ್ (40) ಕೊಲೆಯಾದವರು.
ಅಮ್ಜಾದ್ ಅಬ್ದುಲ್ ಶೇಖ್ (32) ಆರೋಪಿ.
ಅಕ್ಬರ್ ಅಬ್ದುಲ್ ಶೇಖ್ ಅವರು ಕಬ್ಬೂರು ಗ್ರಾಮದಿಂದ ಚಿಕ್ಕೋಡಿಗೆ ದ್ವಿಚಕ್ರ ವಾಹನದ ಮೇಲೆ ಬರುತ್ತಿರುವ ವೇಳೆ ಕಾರಿನಿಂದ ಹಿಂಬಾಲಿಸಿಕೊಂಡು ಬಂದ ಸಹೋದರ, ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದರು. ವೈಯಕ್ತಿ ಕಾರಣವಳಿಂದ ಬೆಳೆದ ವೈಷಮ್ಯವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿದ್ದಾರೆ.
Laxmi News 24×7