Breaking News

ಈ ರಾಜಕಾರಣಕ್ಕೆ ಡಿಕೆ ಶಿವಕುಮಾರ್‌ ಹೆದರುವ ಮಗ ಅಲ್ಲ.ಯಾವುದಕ್ಕೂ ಜಗ್ಗಲ್ಲ: ಡಿಕೆಶಿ

Spread the love

ಬೆಂಗಳೂರು: ಈ ರಾಜಕಾರಣಕ್ಕೆ ಡಿಕೆ ಶಿವಕುಮಾರ್‌ ಹೆದರುವ ಮಗ ಅಲ್ಲ. ಇದು ಸದ್ಯಕ್ಕೆ ಮುಗಿಯುವುದಿಲ್ಲ. ಚುನಾವಣೆ ನಡೆಯುವವರೆಗೂ ಇರುತ್ತದೆ ಎಂದು ಡಿಕೆಶಿ ಹೇಳಿದ್ದಾರೆ

ಸಿಬಿಐ ದಾಳಿ ಬಳಿಕ ನಿವಾಸದಿಂದ ಹೊರಬಂದು ಕಾರ್ಯರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 30 ವರ್ಷಗಳಿಂದ ಇರುವ ಎಲ್ಲ ಮಂತ್ರಿಗಳು ಹರಿಶ್ಚಂದ್ರನ ಮೊಮ್ಮಕ್ಕಳು. ಈಗ ನನಗೆ ರಾಜಕೀಯವಾಗಿ ತೊಂದರೆ ನೀಡುತ್ತಿದ್ದರಲ್ಲ ಅವರೆಲ್ಲ ಚೆನ್ನಾಗಿರಲಿ ಎಂದರು.ನಾನು ನನ್ನ ಸಹೋದರ, ಕುಟುಂಬ ಮತ್ತು ಕಾಂಗ್ರೆಸ್ ಪಕ್ಷ ನಿಮ್ಮ ಅಭಿಮಾನಕ್ಕೆ ತಲೆ ಬಾಗಿ ವಂದಿಸುತ್ತೇನೆ.

2016 ರಲ್ಲಿ ಗುಜರಾತ್ ರಾಜ್ಯಸಭಾ ಚುನಾವಣೆಯ ವೇಳೆ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡಿದ್ದರು. ಮತ್ತೆ ಇಡಿಯವರು ಕೇಸ್ ಹಾಕಿ ತಿಹಾರ್ ಜೈಲಿಗೆ ಕಳುಹಿಸಿದರು. ಈಗ 2020ರಲ್ಲಿ ಸಿಬಿಐ ಬಂದಿದೆ. ಯಾವುದಕ್ಕೂ ನಾನು ಜಗ್ಗುವ ವ್ಯಕ್ತಿಯಲ್ಲ ಎಂದು ಡಿಕೆಶಿ ಗುಡುಗಿದರು

ಅಡ್ವೋಕೇಟ್ ಜನರಲ್ ಬೇಡ ಎಂದರೂ ಸಿಬಿಐನವರು ಬಂದಿದ್ದಾರೆ. ಇದು ಸಿಬಿಐ ತನಿಖೆ ನಡೆಸುವ ಕೇಸಲ್ಲ. ಪಾಪ ಅವರಿಗೆ ಏನು ಒತ್ತಡ ಇರುತ್ತೊ ಏನೋ ಎಂದು ಪ್ರಶ್ನೆ ಮಾಡಿದರು.

ಬೆಳಗ್ಗೆಯಿಂದ ನೀವು ನನ್ನ ನಿವಾಸದ ಬಳಿ ಬಂದಿದ್ದೀರಿ. ನಾನುಂಟು ನೀವುಂಟು. ಭಕ್ತ ಉಂಟು, ಭಗವಂತ ಉಂಟು. ನಾಳೆಯಿಂದ ನಮ್ಮ ಕೆಲಸ ಮಾಡೋಣ. ಉಪಚುನಾವಣೆಯಲ್ಲಿ ಉತ್ತರ ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ರಾಜಕೀಯವಾಗಿ ತೊಂದರೆ ನೀಡಿ ನನ್ನ ಬಾಯಿ ಮುಚ್ಚಿಸಲು ಹೊರಟಿದ್ದಾರೆ. ಆದರೆ ಇದು ಸಾಧ್ಯವಿಲ್ಲ ಎಂದು ಕಾರ್ಯಕರ್ತರಿಗೆ ತಿಳಿಸಿದರು.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ