ಅ.1ರಿಂದ ಭಾರತದಲ್ಲಿ 5ಜಿ ಸೇವೆ ಆರಂಭವಾಗುತ್ತಿದೆ. ದೇಶದಲ್ಲಿ ಡಿಜಿಟಲ್ ರೂಪಾಂತರ ಮತ್ತು ಸಂಪರ್ಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ 5ಜಿ ಸೇವೆ ಸಹಕಾರಿಯಾಗಿದೆ. ಈಗಾಗಲೇ 5ಜಿ ಸ್ಮಾರ್ಟ್ ಮೊಬೈಲ್ ಪೋನ್ ಹೊಂದಿರುವ ದೇಶದ 100 ಮಿಲಿಯನ್ ಜನರು 5ಜಿ ಸೇವೆಯ ಲಭ್ಯತೆಗಾಗಿ ಕಾಯುತ್ತಿದ್ದಾರೆ.
5ಜಿ ಸೇವೆಯಿಂದ ಇಂಟರ್ನೆಟ್ ವೇಗ ಹೆಚ್ಚುವ ಜತೆಗೆ ಹಲವಾರು ಉಪಯೋಗಗಳ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.
4ಜಿ ಗಿಂತ 10 ಪಟ್ಟು ವೇಗ:
ಪ್ರಸ್ತುತ 4ಜಿ ಸೇವೆಗಳಿಗಿಂತ ಸುಮಾರು 10 ಪಟ್ಟು ಹೆಚ್ಚಿನ ವೇಗ ಮತ್ತು ಸಾಮರ್ಥ್ಯವನ್ನು 5ಜಿ ತಂತ್ರಜ್ಞಾನ ಆಧಾರಿತ ಸೇವೆಗಳು ಹೊಂದಿರಲಿದೆ. ಟೆಲಿಕಾಂ ಸೇವಾ ಪೂರೈಕೆದಾರರಿಂದ 5ಜಿ ತಂತ್ರಜ್ಞಾನ ಆಧಾರಿತ ಸೇವೆಗಳಿಗೆ ಮಧ್ಯಮ ಮತ್ತು ಉನ್ನತ ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಬಳಸಿಕೊಳ್ಳಲಾಗುತ್ತದೆ.
8 ಸಂಸೆೆ§ಗಳಲ್ಲಿ ಟೆಸ್ಟ್ ಬೆಡ್:
ದೇಶದ ಎಂಟು ಉನ್ನತ ತಂತ್ರಜ್ಞಾನ ಸಂಸ್ಥೆಗಳಲ್ಲಿ ಸ್ಥಾಪಿಸಲಾದ 5ಜಿ ಟೆಸ್ಟ್ ಬೆಡ್ ಭಾರತದಲ್ಲಿ ದೇಶೀಯ 5ಜಿ ತಂತ್ರಜ್ಞಾನ ಪ್ರಸರಣವನ್ನು ತ್ವರಿತಗೊಳಿಸಿದೆ.
ಮೊಬೈಲ್‌ಗಳು, ಟೆಲಿಕಾಂ ಉಪಕರಣಗಳಿಗಾಗಿ ಉತ್ಪಾದನೆ ಆಧರಿತ ಪೋತ್ಸಾಹಧನ(ಪಿಎಲ್‌ಐ) ಯೋಜನೆಗಳು ಮತ್ತು ದೇಶೀಯವಾಗಿ ಸೆಮಿಕಂಡಕ್ಟರ್ ಉತ್ಪಾದನೆ ಯೋಜನೆಗೆ ಚಾಲನೆ ನೀಡಿರುವುದು 5ಜಿ ಸೇವೆಗಳ ಆರಂಭಕ್ಕೆ ಪೂರಕ ಪರಿಸರ ವ್ಯವಸೆೆ§ಯನ್ನು ನಿರ್ಮಿಸಿದೆ.
ಇಂಡಿಯನ್ ಟೆಲಿಗ್ರಾಫ್ ರೈಟ್ ಆಫ್ ವೇ ತಿದ್ದುಪಡಿ ನಿಯಮಗಳು 2022ರ ಪ್ರಕಾರ, ಡಿಜಿಟಲ್ ಮೂಲಸೌಕರ್ಯ, ಏರಿಯಲ್ ಫೈಬರ್ ಮತ್ತು ಸ್ಟ್ರೀಟ್ ಫೈಬರ್‌ಗಳ ತ್ವರಿತ ಪ್ರಸರಣದಲ್ಲಿ ಉದ್ಯಮಕ್ಕೆ 5ಜಿ ಸಹಾಯ ಮಾಡುತ್ತದೆ.
ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ಲಭ್ಯ:
ಭಾರತದಲ್ಲಿ 5ಜಿ ಇಂಟರ್ನೆಟ್ ಸೇವೆಗಳು ಮೊದಲ ಹಂತದಲ್ಲಿ 13 ನಗರಗಳಲ್ಲಿ ಲಭ್ಯವಿರಲಿವೆ. ಬೆಂಗಳೂರು, ಅಹಮದಾಬಾದ್, ಚಂಡೀಗಢ, ಚೆನ್ನೈ, ನವದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೊದಲ ಹಂತದಲ್ಲಿ 5ಜಿ ಸೇವೆ ಲಭ್ಯವಿರಲಿದೆ.
ದರ ಹೆಚ್ಚಳ ಸಾಧ್ಯತೆ ಕಡಿಮೆ:
3ಜಿ ಮತ್ತು 4ಜಿ ಸೇವೆಗಳಂತೆ, ಟೆಲಿಕಾಂ ಕಂಪನಿಗಳು ಶೀಘ್ರದÇÉೇ 5ಜಿ ಸೇವೆಗಳ ಬಗೆಗಿನ ದರಪಟ್ಟಿ ಘೋಷಿಸಲಿವೆ. ಗ್ರಾಹಕರು ತಮ್ಮ ಸಾಧನಗಳಲ್ಲಿ 5ಜಿ ಸೇವೆಗಳನ್ನು ಬಳಸಲು ಕೊಂಚ ಹೆಚ್ಚು ಮೊತ್ತವನ್ನು ಪಾವತಿಸಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಇನ್ನೊಂದೆಡೆ, ಏರ್‌ಟೆಲ್ ಚೀಫ್ ಟೆಕ್ನಾಲಜಿ ಆಫಿಸರ್(ಸಿಟಿಒ) ರಣದೀಪ್ ಸೆಖೋನ್ ಪ್ರಕಾರ, “ಜಾಗತಿಕವಾಗಿ 5ಜಿ ಮತ್ತು 4ಜಿ ದರಗಳ ನಡುವೆ ಭಾರಿ ವ್ಯತ್ಯಾಸವಿಲ್ಲ. ಹಾಗಾಗಿ ಭಾರತದಲ್ಲಿ 5ಜಿ ಸೇವೆಗಳ ದರವು 4ಜಿ ದರಗಳಿಗೆ ಸಮಾನವಾಗಿರಲಿದೆ. ನಾವು ಕೂಡ ಇದನ್ನೇ ನಿರೀಕ್ಷಿಸುತ್ತಿದ್ದೇವೆ,’ ಎಂದು ಹೇಳಿದ್ದಾರೆ. ಹಾಗಾಗಿ 4ಜಿ ಸೇವೆಗಳಿಗೆ ಹೋಲಿಸಿದರೆ 5ಜಿ ಸೇವೆಗಳಿಗೆ ದರ ಹೆಚ್ಚಳ ಸಾಧ್ಯತೆ ಕಡಿಮೆ ಎನ್ನಬಹುದು.
ಎಲ್ಲಾ ವಿಭಾಗದ ಗ್ರಾಹಕರಿಗೆ ಪ್ರಯೋಜನ:
5ಜಿ ಸೇವೆಯಿಂದ ಎಲ್ಲಾ ವಿಭಾಗದ ಗ್ರಾಹಕರು ಪ್ರಯೋಜನ ಪಡೆಯಬಹುದು. ಮನೆಯಲ್ಲಿ 5ಜಿ ಬಳಸುವ ಗ್ರಾಹಕರು ಫೈಬರ್ ಸಾಧನ ಅಥವಾ 5ಜಿ ಹ್ಯಾಂಡ್‌ಸೆಟ್ ಬಳಸಿ ಹೆಚ್ಚಿನ ವೇಗದ ಇಂಟರ್ನೆಟ್ ಪಡೆಯಬಹುದು