ಬೆಂಗಳೂರು: ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ, ಅತಿವೃಷ್ಟಿ ಪರಿಹಾರ ಕುರಿತು ವಿವರಿಸುವಂತೆ ಸ್ಪೀಕರ್ ಕಾಗೇರಿ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಸೂಚಿಸುತ್ತಿದ್ದಂತೆ ವಿಧಾನಸಭೆಯಲ್ಲಿ ಕೆರೆ ಒತ್ತುವರಿ ಕುರಿತು ಕಾವೇರಿದ ಚರ್ಚೆ ನಡೆಯಿತು.
ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿಗೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಒತ್ತುವರಿ ತೆರವು ಸಮರ್ಪಕವಾಗಿ ಮಾಡಿಲ್ಲ ಎಂದು ಕಾಂಗ್ರೆಸ್ ಸದಸ್ಯ ಕೆ.ಜೆ. ಜಾರ್ಜ್ ಕಿಡಿಕಾರಿದರು. ಕಾಂಗ್ರೆಸ್ ನಾಯಕರ ಅವಧಿಯಲ್ಲಿಯೇ ಕೆರೆಗಳು ಒತ್ತುವರಿಯಾಗಿವೆ ಎಂದು ಬಿಜೆಪಿ ಸದಸ್ಯರು ಆರೋಪಿಸುತ್ತಿದ್ದಂತೆ ಮತ್ತೆ ಸದನದಲ್ಲಿ ಎದ್ದುನಿಂತ ಜಾರ್ಜ್, ನನ್ನ ಕಾಲದಲ್ಲಿ ಒಂದೇ ಒಂದು ಕೆರೆಯನ್ನು ಒತ್ತುವರಿ ಮಾಡಿಲ್ಲ. ಮಾಡಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದರು.
ಈ ವೇಳೆ ಯಾರ್ಯಾರು ಎಷ್ಟೆಷ್ಟು ಕೆರೆಗಳನ್ನು ನುಂಗಿದ್ದಾರೆ ಎಂಬುದನ್ನು ಅಶೋಕ್ ಅವರೆ ಬಹಿರಂಗಪಡಿಸಿ ಎಂದು ಶಾಸಕ ಯತ್ನಾಳ್ ಒತ್ತಾಯಿಸಿದರು. ಬೆಂಗಳೂರಿನಲ್ಲಿ ಯಾವೆಲ್ಲ ಕೆರೆಗಳು ಇದ್ದವು. ಯಾವೆಲ್ಲ ಕೆರೆಗಳು ಒತ್ತುವರಿಯಾಗಿವೆ ಎಂಬ ಬಗ್ಗೆ ಸಚಿವ ಅಶೋಕ್ ಸದನಕ್ಕೆ ವಿವರಿಸಿದರು. ಈ ವೇಳೆ ಸದನದಲ್ಲಿ ಗದ್ದಲ-ಕೋಲಾಹಲ ನಡೆದಿದ್ದು, ವಿಪಕ್ಷ ಹಾಗೂ ಆಡಳಿತ ಪಕ್ಷಗಳ ಸದಸ್ಯರ ಆರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾಯಿತು.
Laxmi News 24×7