ಇದ್ರಿಂದ ಗ್ರಾಹಕರು (Customer) ಬ್ಯಾಂಕ್ ಮೇಲಿನ ವಿಶ್ವಾಸ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಈ ಘಟನೆ ಸಂಬಂಧಿಸಿದಂತೆ ಪೊಲೀಸ್ ತನಿಖೆ (police enquiry) ಚುರುಕುಗೊಂಡಿದೆ. ಈ ನಡುವೆ ಹಣ ಕ್ರೆಡಿಟ್ (Credit) ಆಗಿದ್ದ ಖಾತೆಯಲ್ಲಿ ಸದ್ಯ ಝೀರೋ ಬ್ಯಾಲೆನ್ಸ್ (zero balance) ಇರುವುದು ತಿಳಿದುಬಂದಿದೆ. ಬರೋಬ್ಬರಿ 2.69 ಕೋಟಿ ರೂಪಾಯಿ (2.69 crore rupees) ಹಣವನ್ನು ತನ್ನ ಹೆಂಡತಿ ಅಕೌಂಟ್‌ಗೆ (wife account) ವರ್ಗಾಯಿಸಿರುವ ಅಸಿಸ್ಟಂಟ್ ಬ್ಯಾಂಕ್ ಮ್ಯಾನೇಜರ್ (bank manager), ಇದೀಗ ಎಸ್ಕೇಪ್ ಆಗಿದ್ದಾನೆ.
ಏನಿದು ಗೋಲ್ಮಾಲ್ ಪ್ರಕರಣ?
ಹೌದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬ್ಯಾಂಕ್ ಆಫ್ ಬರೋಡಾದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುವ ಕುಮಾರ್ ಬೊನಾಲ್ ಎಂಬಾತ 2 ಕೋಟಿ ಹಣವನ್ನ ತನ್ನ ಹೆಂಡತಿಯ ಖಾತೆಗೆ ವರ್ಗಾಯಿಸಿ ಬಹುದೊಡ್ಡ ಹಗರಣ ಮಾಡಿದ್ದಾನೆ.. ಈ ಪ್ರಕರಣ ಮುನ್ನೆಲೆಗೆ ಬರುತ್ತಿದ್ದಂತೆ ಈಗ ಎಸ್ಕೇಪ್ ಆಗಿದ್ದು, ಜಿಲ್ಲೆಯಿಂದಲೇ ತಲೆಮರೆಸಿಕೊಂಡಿದ್ದಾನೆ…
ಬ್ಯಾಂಕ್‌ನಲ್ಲಿ ಹಣ ಇಟ್ಟರೆ ಸೇಫ್ ಅಲ್ವಾ?
ಈ ಪ್ರಕರಣದಿಂದ ಗ್ರಾಹಕರು ಬೇಲಿಯೇ ಎದ್ದು ಹೊಲ ಮೇಯುವಂತಾಯಿತು ಎಂದು ಬ್ಯಾಂಕಿನ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತಾಗಿದೆ… ಬ್ಯಾಂಕಿನಲ್ಲಿ ಹಣ ಇಟ್ಟರೆ ಸೇಪ್ ಅಂತಾರೆ ಆದ್ರೆ ಇಂತ ಖದೀಮ ಉದ್ಯೋಗಿಗಳನ್ನ ನಂಬಿ ಹಣ ಇಟ್ರೆ ಮೂರು ನಾಮ ಗ್ಯಾರಂಟಿ…