ಬೆಳಗಾವಿಯಲ್ಲಿ ಚಿರತೆ ಸೆರೆಗೆ ಆಪರೇಷನ್ ಗಜಪಡೆ ಮುಕ್ತಾಯವಾಗಿದ್ದು. 250 ಎಕರೆ ಪ್ರದೇಶದ ಗಾಲ್ಫ ಮೈದಾನದಲ್ಲಿ ಎರಡು ಆನೆಗಳನ್ನು ಬಳಸಿ ನಡೆಸಿದ ಕೋಂಬಿಂಗ್ ಅಂತ್ಯವಾಗಿದೆ.
ಮಧ್ಯಾಹ್ನ 12.30ರಿಂದ ನಡೆದಿದ್ದ ಶೋಧ ಕಾರ್ಯಾಚರಣೆ ಮುಕ್ತಾಯವಾಗಿದ್ದು. 250 ಎಕರೆ ಪ್ರದೇಶದಲ್ಲಿ 7 ಕಿಮೀ ವ್ಯಾಪ್ತಿಯಲ್ಲಿ ಕೋಂಬಿಂಗ್ ನಡೆಸಲಾಯಿತು. ಅಲ್ಲಲ್ಲಿ ಕೆಲವೆಡೆ ಚಿರತೆ ಓಡಾಡಿದ ಕುರುಹುಗಳು ಪತ್ತೆಯಾಗಿದ್ದು. ಹಂದಿ ಬೇಟೆಯಾಡಿ ಅರ್ಧ ಮಾಂಸವನ್ನು ಚಿರತೆ ತಿಂದಿದೆ. ಕಳೆದ 5 ಗಂಟೆಗಳಿಂದ ನಿರಂತರವಾಗಿ ನಡೆದ ಶೋಧಕಾರ್ಯ ಅಂತ್ಯವಾಯ್ತು
ಆನೆಗಳ ಜೊತೆ ಅರವಳಿಕೆ ತಜ್ಞರು, ಅರಣ್ಯ, ಪೆÇಲೀಸ್ ಸಿಬ್ಬಂದಿ ತೆರಳಿದ್ದರು. ಇನ್ನು ಹುಕ್ಕೇರಿಯ ಹಂದಿ ಹಿಡಿಯುವ ತಂಡದ ಸದಸ್ಯರು ಕೂಡ ವಾಪಸ್ ಆಗಿದ್ದಾರೆ. ನಾಳೆ ಬೆಳಗ್ಗೆಯಿಂದ ಮತ್ತೆ ಎರಡು ಆನೆಗಳನ್ನು ಬಳಸಿ ಶೋಧ ಕಾರ್ಯ ಮುಂದುವರಿಯಲಿದೆ. ಚಿರತೆ ಸೆರೆಯಾಗದ ಹಿನ್ನೆಲೆ 22 ಶಾಲೆಗಳ ರಜೆ ಮುಂದುವರಿಸಲಾಗಿದ್ದು. ಗಾಲ್ಫ್ ಮೈದಾನದ 1 ಕಿಮೀ ವ್ಯಾಪ್ತಿಯ ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಮುಂದುವರಿದಿದೆ.