Breaking News

ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಕ್ಲರ್ಕ್ ಲಂಚ ಪಡೆಯುತ್ತಿದ್ದ ವೇಳೆA.C.B.ಬಲೆಗೆ

Spread the love

ಖಾನಾಪುರ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿಯ ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಕ್ಲರ್ಕ್ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಹೌದು ನಿಟ್ಟೂರು ಗ್ರಾಮ ಪಂಚಾಯತಿ ಪಿಡಿಓ ಶ್ರೀದೇವಿ ಮತ್ತು ಕ್ಲರ್ಕ್ ಸಿದ್ದಪ್ಪ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದವರು. ಪ್ರಭುನಗರದ ನಿವಾಸಿ ರಾಮಚಂದ್ರ ಗಂಗಾರಾಮ ಪಾಟೀಲ ಇವರು ವ್ಹಿ ಪಿ ಸಿ ನಂಬರ್ 154 ಮನೆ ನಂಬರ್ 90 ನೇದ್ದು ಇದ್ದು ಇದರಲ್ಲಿ ಅರ್ಧ ಭಾಗದಲ್ಲಿ ತಂದೆಯ ಹೆಸರು ಕಡಿಮೆ ಮಾಡಿ ತಮ್ಮ ಹೆಸರನ್ನು ನಮೂದಿಸಿ ಉತ್ತಾರ ಕೊಡಲು ಪಿಡಿಒ ಅವರಲ್ಲಿ ಅರ್ಜಿಯನ್ನು ನಿಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ಸಲ್ಲಿಸಿದರು ಇದಕ್ಕಾಗಿ ಪಿಡಿಒ ಶ್ರೀದೇವಿ ಗುಂಡಾಪೂರ ಮತ್ತು ಕ್ಲಾರ್ಕ್ ಸಿದ್ದಪ್ಪ ನಾಯಕ ಅವರು 4 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಆ ಹಿನ್ನೆಲೆಯಲ್ಲಿ ಈ ಇಬ್ಬರು ಅಧಿಕಾರಿಗಳ ವಿರುದ್ಧ ರಾಮಚಂದ್ರ ಪಾಟೀಲ್ ಭ್ರμÁ್ಟಚಾರ ನಿಗ್ರಹ ದಳದವರ ಕಡೆ ದೂರು ನೀಡಿದ್ದರು ಇದರ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಭ್ರμÁ್ಟಚಾರ ನಿಗ್ರಹ ದಳ ಅಧಿಕಾರಿಗಳು ಹಣ ಸ್ವೀಕರಿಸುವ ಸಂದರ್ಭದಲ್ಲಿಯೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಮುಂದಿನ ತನಿಖೆಯನ್ನು ಎಸಿಬಿ ಅಧಿಕಾರಿಗಳು ಕೈಗೊಂಡಿದ್ದಾರೆ. ಎಸಿಬಿ ಅಧಿಕ್ಷಕ ಬಿ.ಎಸ್.ನ್ಯಾಮಗೌಡ, ಉಪ ಅಧೀಕ್ಷಕ ಕರುಣಾಕರ ಶೆಟ್ಟಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ