ಬೆಳಗಾವಿಯಲ್ಲಿ ಮಗನ ಮೇಲೆ ಚಿರತೆ ದಾಳಿ ಮಾಡಿದ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವನ್ನಪ್ಪಿದ ಘಟನೆ ಬೆಳಗಾವಿಯ ತಾಲೂಕಿನ ಖನಗಾಂವಿ ಕೆಎಚ್ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಖನಗಾವಿ ಕೆ.ಹೆಚ್. ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಜಾಧವ್ ನಗರದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಕಾರ್ಮಿಕ ಖನಗಾಂವಿಯ ಸಿದ್ರಾಯಿ ನಿಲಜ್‌ಕರ್ (೩೮) ಎಂಬವರ ಮೇಲೆ ಮೇಲೆ ಚಿgಚಿve ದಾಳಿ ಮಾಡಿತ್ತು. ಈ ವೇಳೆ ಸಿದ್ರಾಯಿ ಭುಜದ ಮೇಲೆ ಚಿತರೆ ಚೂರಿದ ಗಾಯ ಉಂಟಾಗಿತ್ತು. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮಗ ಸಿದ್ರಾಯಿ ವಾಪಸ್ ಆಗುತ್ತಿದ್ದರು.
ಈ ವೇಳೆ ಮಗ ಸಿದ್ರಾಯಿ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ತಾಯಿ ಶಾಂತಾಗೆ ಹೃದಯಾಘಾತವಾಗಿದೆ. ಪ್ರೀತಿಯ ಮಗನ ಮೇಲೆ ಚಿರತೆ ದಾಳಿ ಮಾಡಿದ ಸುದ್ದಿಯನ್ನು ಕೇಳುತ್ತಲೇ ತಾಯಿಯ ಹೃದಯ ಒಡೆದುಹೋಗಿದೆ. ಹೃದಯಾಘಾತದಿಂದ ಶಾಂತಾ ಮಿರಜಕರ್(೬೫) ಸಾವನ್ನಪ್ಪಿದ್ದಾಳೆ.
ಇನ್ನು ಒಂದು ಕಡೆ ಸಿದ್ರಾಯಿ ಮೇಲೆ ಚಿರತೆ ದಾಳಿ ಇನ್ನೊಂದೆಡೆ ಮನೆಯ ಹಿರಿಯ ಜೀವಿ ವಿಷಯ ತಿಳಿದು ಹೃದಯಾಘಾತದಿಂದ ಸಾವನ್ನಪ್ಪಿದ್ದು ಕುಟುಂಬದಲ್ಲಿ ಶೋಕ ಸಾಗರವೇ ಮನೆಮಾಡಿದೆ. ಖನಗಾವಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.