ರಾಜಕುಮಾರ್ ಟಾಕಳೆಗೆ ನಿರೀಕ್ಷಣಾ ಜಾಮೀನನ್ನು ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ಬೆಳಗಾವಿಯಲ್ಲಿ ನವ್ಯಶ್ರೀ ರಾವ್ ಪರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಟಾಕಳೆ ನನ್ನನ್ನು ಹೆಂಡತಿಯಾಗಿ ಒಪ್ಪಿಕೊಳ್ಳದಿದ್ದರೆ ರಾಜಕುಮಾರನ ರಾಣಿ ಹೇಗಾಗಬೇಕೆಂದು ನನಗೆ ಗೊತ್ತಿದೆ ಎಂದು ನವ್ಯಶ್ರೀ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಟಿಯನ್ನು ನನಡೆಸಿ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ನಾನು ವಿದೇಶದಿಂದ ಹಿಂದುರಿಗಿದ ಮೇಲೆ ಕಳೆದ 20 ದಿನಗಳಿಂದ ಬೆಳಗಾವಿಯಲ್ಲಿದ್ದುಕೊಂಡು ಕಾನೂನು ಹೋರಾಟವನ್ನು ಮಾಡುತ್ತಿದ್ದೇನೆ. ನನಗಾದ ಅನ್ಯಾಯ ಕುರಿತಂತೆ ಎಪಿಎಂಸಿ ಠಾಣೆಯಲ್ಲಿ ದೂರನ್ನು ಕೂಡ ದಾಖಲಿಸಿದ್ದೆ.
ಅದಕ್ಕೆ ಸಂಬಂಧಿಸಿದಂತೆ ರಾಜ್‍ಕುಮಾರ್ ಟಾಕಳೆ ಆಂಟಿಸಿಪೇಟರಿ ಬೇಲ್‍ಗೆ ಅರ್ಜಿ ಹಾಕಿದ್ದರು. ಆದರೆ ನ್ಯಾಯಾಲಯ ಈ ಬೇಲ್ ಅರ್ಜಿಯನ್ನು ತಳ್ಳಿಹಾಕಿದೆ. ಇನ್ನು ನಾನು ಕಾನೂನು ರೀತಿಯ ಹೋರಾಟವನ್ನು ಮುಂದುವರೆಸುತ್ತೇನೆ.
ನಾನು ಯಾವುದಕ್ಕೂ ಹೆದರುವುದಿಲ್ಲ. ಈಗಾಗಲೇ ಟಾಕಳೆ ರವರ ಮೇಲೆ ಎಫ್‍ಐಆರ್ ಆಗಿದೆ. ಆದರೆ ಇನ್ನೂ ಅವರ ಬಂಧನವಾಗಿಲ್ಲ. ಮಂಗಳವಾರ ಬೆಂಗಳೂರಿಗೆ ಹೋಗಿ ನನ್ನ ವಕೀಲರನ್ನೆಲ್ಲ ಭೇಟಿಯಾಗಿ ವೀಡಿಯೋ ಹರಿದಾಡಿದ್ದ ಕುರಿತಂತೆ ನಾನು ಮೊದಲು ಕೇಸ್ ದಾಖಲಿಸಿದೆ.
ಈ ಎಲ್ಲಾ ಘಟನೆಗಳು ನಡೆದಿದ್ದು ಬೆಳಗಾವಿ ಸುತ್ತಮುತ್ತವಾದ್ದರಿಂದ ನಾನು ಮೊದಲು ಎಪಿಎಂಸಿ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದೇನೆ. ನನಗೆ ಪೊಲೀಸರ ಮೇಲೆ ನನಗೆ ವಿಸ್ವಾಸವಿದೆ. ಅವರು ನನಗೆ ನ್ಯಾಯವನ್ನು ಕೊಟ್ಟೇ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.