Breaking News

ಬೆಳಗಾವಿ ನಗರಕ್ಕೆ ನುಗ್ಗಿದ ಚಿರತೆ

Spread the love

ಬೆಳಗಾವಿ: ಇಲ್ಲಿನ ಜಾಧವ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಚಿರತೆ ದಾಳಿ ಮಾಡಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ನಗರದ ಮಧ್ಯ ಭಾಗದಲ್ಲಿಯೇ ಚಿರತೆ ನುಗ್ಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ.

ಜಾಧವ ನಗರದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಖನಗಾವಿ ಗ್ರಾಮದ ನಿವಾಸಿ ಸಿದರಾಯಿ ಲಕ್ಷ್ಮಣ ಮಿರಜಕರ್ (38) ಅವರು ಕೆಲಸದಲ್ಲಿ ನಿರತರಾದ ವೇಳೆ ಅವರ ಮೇಲೆ ಎಗರಿದ ಚಿರತೆ ಭುಜಕ್ಕೆ ಪರಚಿದೆ.

 

ಅಲ್ಲಿ ಜನರ ಚೀರಾಟ ಕೇಳಿದ ನಂತರ ಓಡಿ ಹೋಗಿ ಪೊದೆಯಲ್ಲಿ ಅವಿತುಕೊಂಡಿದೆ. ಇದೇ ಜಾಗದಲ್ಲಿರುವ ಯಶೋಧನ್ ಜಾಧವ ಎನ್ನುವವರ ಮನೆ ಪಕ್ಕದಲ್ಲೇ ಚಿರತೆ ಓಡಾಡಿದ್ದು, ಹೆಜ್ಜೆ ಗುರುತುಗಳೂ ಪತ್ತೆಯಾಗಿವೆ.

ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಅವಿತಿರುವ ಜಾಗದ ಶೋಧ ನಡೆಸಿದರು.

ಈಚೆಗಷ್ಟೇ ಸವದತ್ತಿ, ಮುನವಳ್ಳಿ, ಚಿಕ್ಕೋಡಿ ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿಯೂ ಚಿರತೆ ಓಡಾಡಿದ ಗುರುತುಗಳು ಪತ್ತೆಯಾಗಿದ್ದವು.

ಆದರೆ, ಈಗ ಜನವಸತಿ ಇರುವ ಪ್ರದೇಶದಲ್ಲಿಯೇ ಚಿರತೆ ಕಂಡಿದೆ.

ಚಿರತೆ ಸೆರೆಗೆ ಗದಗ ಪರಿಣತರ ತಂಡ

ಬೆಳಗಾವಿಯ ಜಾಧವ ನಗರದ ಪೊದೆಯಲ್ಲಿ ಅವಿತುಕೊಂಡ ಚಿರತೆ ಸೆರೆ ಹಿಡಿಯಲು ಗದಗದಿಂದ ಪರಿಣತರ ತಂಡವನ್ನು ಕರೆಸಲಾಗಿದೆ. ಈ ರೀತಿ ನಗರಕ್ಕೆ ನುಗ್ಗುವ ವನ್ಯಮೃಗಗಳನ್ನು ಸೆರೆ ಹಿಡಿಯುವ ಪರಿಣತ ಸಿಬ್ಬಂದಿ ಬೆಳಗಾವಿಯಲ್ಲಿ ಇಲ್ಲ. ಹೀಗಾಗಿ, ಗದಗದಿಂದ ವಿಶೇಷ ತಂಡ ಹಾಗೂ ಸಲಕರಣೆ ಕಳುಹಿಸುವಂತೆ ಅಧಿಕಾರಿಗಳು ಕೋರಿದ್ದಾರೆ.

ಜಾಧವ ನಗರದ ಮನೆಯೊಂದರ ಮುಂದೆ ಹಾಕಿದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಓಡಾಡಿದ್ದು ಕಂಡಿದೆ.

ಸ್ಥಳದಲ್ಲೇ ಬೀಡು ಬಿಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಚಿರತೆ ಮೇಲೆ ನಿಗಾ ವಹಿಸಿದೆ. ಡ್ರೋನ್ ಕ್ಯಾಮೆರಾ ಹಾರಿಸಿ ಚಿರತೆಯ ಚಲನ ವಲನ ಗಮನಿಸಲಾಗುತ್ತಿದೆ.

ಚಿರತೆ ಒಬ್ಬರ ಬಲಭುಜಕ್ಕೆ ಪರಚಿದ್ದರಿಂದ ರಕ್ತ ಬಂದು ಗಾಯವಾಗಿದೆ. ಇನ್ನೊಬ್ಬರ ಮೇಲೆ ದಾಳಿಗೆ ಮಾಡಿದ್ದರೂ ಅವರಿಗೆ ಹೆಚ್ಚಿನ ಗಾಯಗಳಾಗಿಲ್ಲ.

ಕಟ್ಟಡ ಕೆಲಸ ಮಾಡುತ್ತಿದ್ದವರ ಬೆನ್ನಿನ ಹಿಂದೆ ಬಂದ ಚಿರತೆ ಮೇಲೆರಗಿತು. ಇನ್ನೂ ಕೆಲವರು ಕೆಲಸದ ಸ್ಥಳದಲ್ಲಿದ್ದರು. ಗಾಬರಿಯಾಗಿ ಏಕಾಏಕಿ ಎಲ್ಲರೂ ಚೀರಾಡಿದ್ದರಿಂದ ಚಿರತೆ ಪೊದೆಯಲ್ಲಿ ಅವಿತಿತು.

ಇತ್ತ ಕಾರ್ಮಿಕರೂ ದಿಕ್ಕಾಪಾಲಾಗಿ ಓಡಿದರು.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ