ಯಾದಗಿರಿ: ನಗರದ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಮದ್ಯ ಸಂಗ್ರಹ ಆವರಣದಲ್ಲಿ ಮಾರಾಟವಾಗದೆ ಉಳಿದುಕೊಂಡಿದ್ದ 16 ಲಕ್ಷ ಮೌಲ್ಯದ ಮದ್ಯವನ್ನು ಅಧಿಕಾರಿಗಳು ಇಂದು ನಾಶಪಡಿಸಿದ್ದಾರೆ.
ನಾಕ್ ಔಟ್ ಕಂಪನಿಯ ಪೋಸ್ಟರ್ ಗೋಲ್ಡ್, ಲಾಗರ್, ನಾಕೌಟ್ ಸ್ಟ್ರಾಂಗ್‍ಗೆ ಸೇರಿದ ಒಟ್ಟು 1,028 ಬಾಕ್ಸ್‌ಗಳಲ್ಲಿದ್ದ ಲಕ್ಷಕ್ಕೂ ಅಧಿಕ ಬಿಯರ್ ಬಾಟಲಿಗಳನ್ನು ನಾಶಪಡಿಸಲಾಗಿದೆ. ಯಾದಗಿರಿ ನಗರದ ಹೊರ ವಲಯದಲ್ಲಿರುವ ಅಬಕಾರಿ ಉಗ್ರಾಣದ ಮುಂಭಾಗದಲ್ಲಿ ಅಧಿಕಾರಿಗಳು ಅವಧಿ ಮುಗಿದಿದ್ದ ಈ ಮದ್ಯವನ್ನು ನಾಶಪಡಿಸಿದ್ದಾರೆ. ಜಾನುವಾರುಗಳಿಗೆ ಹಾಗೂ ಪರಿಸರಕ್ಕೆ ತೊಂದರೆ ಆಗದಂತೆ ಇಲಾಖೆಯಿಂದ ಅಗತ್ಯ ಮುಂಜಾಗ್ರತೆ ಕ್ರಮ ಕೂಡ ಕೈಗೊಳ್ಳಲಾಗಿತ್ತು.
ಅಬಕಾರಿ ಇಲಾಖೆಯ ಉಪ ನೀರಿಕ್ಷರಾದ, ಶ್ರೀರಾಮ್ ರಾಠೋಡ್, ಮಳಿಗೆ ಅಬಕಾರಿ ನೀರಿಕ್ಷಕ ಪ್ರಕಾಶ ಮಾಕೊಂಡ ನೇತೃತ್ವದ ತಂಡ ಪರಿಸರಕ್ಕೆ ಹಾನಿ ಆಗದಂತೆ ಎಚ್ಚರಿಕೆ ವಹಿಸಿ ದೊಡ್ಡ ಗುಂಡಿ ತೆಗೆದು ಅದರಲ್ಲಿ ಮದ್ಯವನ್ನು ಸುರಿದು ನಂತರ ಮಣ್ಣು ಮುಚ್ಚಲಾಯಿತು.
ಈ ಸಂದರ್ಭದಲ್ಲಿ ಮಳಿಗೆ ವ್ಯವಸ್ಥಾಪಕ ವಿ.ಡಿ.ವೆಂಕಟೇಶ್, ಸಹಾಯಕ ವ್ಯವಸ್ಥಾಪಕ ಅಡಿವೆಪ್ಪ ಭಜಂತ್ರಿ, ಎಮ್.ಎಸ್.ಪಾಟೀಲ್, ಶಿವರಾಜ್ ಕುಮಾರ್ ಮುಂಡರಗಿಮಠ, ದೇವಿಂದ್ರ ಗೋನಾಳ, ಹತ್ತಿಕುಣಿ ನಾಡ ಕಛೇರಿ ಉಪ ತಹಶೀಲ್ದಾರ್ ಬಸವರಾಜ ಮತ್ತು ಕಂಪನಿಯ ಪ್ರತಿನಿಧಿ ಶಿವಕುಮಾರ್ ಹೇರೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.