ಬೆಂಗಳೂರು: ರಾಜ್ಯ ಸರ್ಕಾರದಿಂದ ಡಿಜಿಟಲ್ ಕ್ರಾಂತಿ ಉಂಟುಮಾಡುವ ಸಲುವಾಗಿ ಅನೇಕ ಇಲಾಖೆಯನ್ನು ಡಿಜಿಟಲೀಕರಣ ಮಾಡಲಾಗಿದೆ. ಇದೀಗ ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳನ್ನು ಇದೇ ಮಾದರಿಯಲ್ಲಿ ಮಾಡಿದೆ. ಹೀಗಾಗಿ ಪಿಡಿಓಗಳ ಡಿಜಿಟಲ್ ಸಹಿ ಇಲ್ಲದ ಯಾವುದೇ ಪ್ರಮಾಣ ಪತ್ರಗಳು ಇನ್ಮುಂದೆ ಅಮಾನಲ್ಯ ಎಂಬುದಾಗಿ ಸರ್ಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ತರೋ ನಿಟ್ಟಿನಲ್ಲಿ ನಾಗರೀಕ ಸೇವೆಗಳನ್ನು ಹೊಸದಾಗಿ ಅಭಿವೃದ್ಧಿ ಪಡಿಸಿದಂತ ಪಂಚತಂತ್ರ-2.2 ತಂತ್ರಾಂಶದ ಮೂಲಕವೇ ಗ್ರಾಮ ಪಂಚಾಯ್ತಿಗಳು ನಡೆಸಬೇಕು ಎಂದು ತಿಳಿಸಿದೆ.
ಜುಲೈ.6ರಿಂದಲೇ ಪಂಚತಂತ್ರ ತಂತ್ರಾಂಶವನ್ನು ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಪಂಚತಂತ್ರ 2.0 ಮೂಲಕವೇ ನಾಗರೀಕ ಸೇವೆಗಳನ್ನು ಡಿಜಿಟೀಕರಣಗೊಳಿಸಲಾಗಿದೆ.
ಗ್ರಾಮ ಪಂಚಾಯ್ತಿ ನೀಡುವಂತ ನಾನಾ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪಂಚತಂತ್ರ ತಂತ್ರಾಂಶದ ಮೂಲಕವೇ ಸಂಸ್ಕರಿಸಿ, ವಿಲೇವಾರಿ ಮಾಡಬೇಕು. ರಸೀದಿಗಳ ಮೇಲೆ ಪಿಡಿಓ ಡಿಜಿಟಲ್ ಸಹಿ, ವಿತರಣೆ ಸಂಖ್ಯೆ, ಇನ್ನಿತರ ಪೂರಕ ಮಾಹಿತಿಯನ್ನು ಹೊಂದಿಲ್ಲದೇ ಇದ್ದರೇ, ಆ ಪ್ರಮಾಣ ಪತ್ರ ಅಮಾನ್ಯ ಎಂಬುದಾಗಿ ಆದೇಶದಲ್ಲಿ ಸ್ಪಷ್ಟ ಪಡಿಸಲಾಗಿದೆ.
Laxmi News 24×7