Breaking News

ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಬಳಿಯೇ ಬಿತ್ತು ವಿಂಡ್​ ಪವರ್​ ಫ್ಯಾನ್

Spread the love

ಬಾಗಲಕೋಟೆ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯೇ ಏಕಾಏಕಿ ವಿಂಡ್​ ಪವರ್​ ಫ್ಯಾನ್​ ಬಿದ್ದಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕೆಲಸಗಾರರು ಪಾರಾಗಿದ್ದಾರೆ.

ಹಿರೇಓತಗೇರಿ ಗ್ರಾಮದಲ್ಲಿ ಹೊಲಗಳಿಗೆ ಅಳವಡಿಸಲಾಗಿರುವ ವಿಂಡ್ ಪವರ್ ಫ್ಯಾನ್​ ಬಿದ್ದಿದ್ದು, ಅದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಯಾವುದೇ ಹಾನಿಯಾಗಿಲ್ಲ.

 

ಇಳಕಲ್ ತಾಲೂಕಿನ‌ ಹಿರೇಓತಗೇರಿ ಗ್ರಾಮದಲ್ಲಿ ಕೆಲವೆಡೆ ವಿಂಡ್​ ಪವರ್ ಫ್ಯಾನ್​ ಅಳವಡಿಕೆ ಮಾಡಲಾಗಿದೆ. ಆದರೆ ಭಾನುವಾರ ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಬಳಿಯೇ ತುಂಡಾಗಿ ಬಿದ್ದಿದ್ದು, ಇಲ್ಲಿನ ಜನರಿಗೆ ಆತಂಕ ಮನೆ ಮಾಡಿದೆ. ಫ್ಯಾನ್​ ತುಂಡರಿಸಿ ಬಿದ್ದಿದ್ದರಿಂದ ಬೆಳೆಹಾನಿ ಆಗಿದೆ ಎಂದು ಹೊಲದ ಮಾಲೀಕ ಆರೋಪಿಸಿದ್ದಾರೆ. 


Spread the love

About Laxminews 24x7

Check Also

ಚಾಮುಂಡೇಶ್ವರಿ ಸಂಜೀವಿನಿ ಮಹಿಳಾ ಸಂಘಟನೆಯ ಕಾರ್ಯಕ್ಕೆ ಒಲಿದು ಬಂತು ರಾಷ್ಟ್ರಮಟ್ಟದ ಪ್ರಶಸ್ತಿ

Spread the love ಬಾಗಲಕೋಟೆ: ಮಹಿಳೆಯರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಹಿಳಾ ಸಂಘಟನೆಯೊಂದು ಸಾಕ್ಷಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ