ಬೆಳಗಾವಿಯ ಸಿಇಎನ್ ಠಾಣೆಯ ಸಿಪಿಐ ಬಿ.ಆರ್.ಗಡ್ಡೇಕರ್ ಸೇರಿ ರಾಜ್ಯದ 92 ಪೊಲೀಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೌದು ಬಿ.ಆರ್.ಗಡ್ಡೇಕರ್ ಅವರನ್ನು ಬೆಳಗಾವಿಯ ಹೆಸ್ಕಾಂ ಜಾಗೃತ ದಳಕ್ಕೆ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ಗಡ್ಡೇಕರ್ ಸ್ಥಾನಕ್ಕೆ ರಾಜ್ಯ ಗುಪ್ತವಾರ್ತೆಯಲ್ಲಿದ್ದ ಸಂಜೀವ್ ಕಾಂಬಳೆ ಅವರನ್ನು ಬೆಳಗಾವಿಯ ಸಿಇಎನ್ ಠಾಣೆ ಸಿಪಿಐ ಆಗಿ ನೇಮಕ ಮಾಡಲಾಗಿದೆ. ಅದೇ ರೀತಿ ರಾಜ್ಯದ ಒಟ್ಟು 92 ಪೊಲೀಸ್ ಅಧಿಕಾರಿಗಳನ್ನು ಏಕಕಾಲಕ್ಕೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.