Breaking News

ಹೀಗಿರಬೇಕು ಮದುವೆ ಅಗ್ರಿಮೆಂಟ್‌! ಒಪ್ಪಂದ ಕೇಳಿದರೆ ನೀವು ನಗುವುದು ಗ್ಯಾರಂಟಿ!

Spread the love

ಮದುವೆಯಲ್ಲಿ ನವ ವಧು-ವರರು ಏಳೇಳು ಜನ್ಮಕ್ಕೂ ಜತೆಯಾಗಿರುವುದಾಗಿ ಪ್ರಮಾಣಿಸುವುದು ಸಾಮಾನ್ಯ. ಆದರೆ ಈ ಮದುವೆಯಲ್ಲಿ ನಡೆದ ಒಪ್ಪಂದ ಕೇಳಿದರೆ ನೀವು ನಗುವುದು ಗ್ಯಾರಂಟಿ.

‘ತಿಂಗಳಿಗೊಂದೇ ಪಿಜ್ಜಾ ತರಿಸಬೇಕು’, ’15 ದಿನಕ್ಕೊಮ್ಮೆ ಶಾಪಿಂಗ್‌ಗೆ ಕರೆದೊಯ್ಯಬೇಕು’, ‘ಮನೆ ಊಟಕ್ಕೆ ಯಾವಾಗಲೂ ಬೇಡ ಎನ್ನಕೂಡದು’, ‘ಪ್ರತಿದಿನ ಜಿಮ್‌ಗೆ ಹೋಗಬೇಕು’, ‘ಪ್ರತಿ ಪಾರ್ಟಿಯಲ್ಲಿ ಒಳ್ಳೊಳ್ಳೆ ಫೋಟೋ ತೆಗೆದುಕೊಡಬೇಕು’, ‘ಪ್ರತಿ ಭಾನುವಾರ ಗಂಡನೇ ತಿಂಡಿ ರೆಡಿ ಮಾಡಬೇಕು’.

 

ಇದು ಇತ್ತೀಚೆಗೆ ಅಸ್ಸಾಂನ ಗುವಾಹಟಿಯಲ್ಲಿ ಮದುವೆಯಾದ ವರ-ವಧು ಸಹಿ ಹಾಕಿರುವ ಒಪ್ಪಂದದಲ್ಲಿರುವ ಅಂಶಗಳು. ಸ್ನೇಹಿತರಿಂದ ತಯಾರಾಗಿ ಅವರದ್ದೂ ಸಹಿ ಇರುವ ಈ ರೀತಿಯ ಒಪ್ಪಂದ ಪತ್ರಕ್ಕೆ ವರ ಮಿಂಟು ಮತ್ತು ವಧು ಶಾಂತಿ ಸಹಿ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.


Spread the love

About Laxminews 24x7

Check Also

ಬೆಂಗಳೂರಿನಲ್ಲಿ ರಾತ್ರಿಯಿಡೀ ಮಳೆಯ ಅಬ್ಬರ

Spread the love ಬೆಂಗಳೂರು: ನಗರದಲ್ಲಿ ತಡರಾತ್ರಿ ನಿರಂತರವಾಗಿ ಸುರಿದ ಮಳೆ ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ಶುಕ್ರವಾರ ರಾತ್ರಿ 9 ಗಂಟೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ