ಕೊಳ್ಳೇಗಾಲ: ಮುಂದಿನ ವರ್ಷದ ವಿಧಾನಸಭಾ ಚುನಾವಣೆ ನನಗೆ ಕೊನೆಯ ಚುನಾವಣೆಯಾಗಿದ್ದು, ಬಳಿಕ ರಾಜಕೀಯದಿಂದ ನಿವೃತ್ತಿ ಹೊಂದುವ ಮೂಲಕ ಇತರರಿಗೆ ಅವಕಾಶ ಕಲ್ಪಿಸಿಕೊಡುವುದಾಗಿ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸಿದರು.
ಪಟ್ಟಣದ ಬಸ್ತೀಪುರ ಬಡಾವಣೆಯಲ್ಲಿ ಆಯೋಜಿಸಿದ್ದ ಸಿದ್ದಪ್ಪಾಜಿ ಕಂಡಾಯ ಮತ್ತು ಕೊಂಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಆಗಸ್ಟ್ 3ರಂದು ನಡೆಯುವ ನನ್ನ 75ನೇ ಜನ್ಮ ದಿನೋತ್ಸವಕ್ಕೆ ಆರೆಸ್ಸೆಸ್‌ನವರು ಸಿದ್ದರಾಮಯ್ಯ ಅವರ ಉತ್ಸವ ಎಂದು ನಾಮಕರಣ ಮಾಡಿದ್ದಾರೆ. ಅದು ಉತ್ಸವ ಅಲ್ಲ ಅಮೃತೋತ್ಸವ. ಅದಕ್ಕೆ ಎಲ್ಲರೂ ಬನ್ನಿ ಎಂದು ಆಹ್ವಾನ ನೀಡಿದರು.