Breaking News

51.46 ಲಕ್ಷ ರೂಗಳ ಸಮುದಾಯ ಭವನ ಕಾಮಗಾರಿಗೆ ಶಾಸಕ ಕುಮಠಳ್ಳಿ ಚಾಲನೆ

Spread the love

ಯಾವುದೇ ಒಂದು ಕೆಲಸದ ಹಿಂದೆ ಹಲವಾರು ಜನರ ಪ್ರತ್ಯಕ್ಷ, ಅಪ್ರತ್ಯಕ್ಷ ಶ್ರಮವು ಇರುತ್ತದೆ, ಎಲ್ಲರ ಶ್ರಮದಿಂದ ಯಲಿಹಡಲಗಿ ಗ್ರಾಮದಲ್ಲಿ ಆದಿಬಣಜಿಗ ಸಮಾಜದ ಈ ಬೃಹತ್ ಸಮುದಾಯ ಭವನ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು.

ಅವರು ತಾಲೂಕಿನ ಯಲಿಹಡಲಗಿ ಗ್ರಾಮದಲ್ಲಿ ಸುಮಾರು 51.46 ಲಕ್ಷ ರೂಗಳ ಆದಿ ಬಣಜಿಗ ಸಮಾಜದ ಸಮುದಾಯ ಭವನದ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡುತ್ತಾ ಆದಿ ಬಣಜಿಗ ಸಮಾಜದ ಜೊತೆ ನಾನು ಸದಾಕಾಲ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೆನೆ ಈ ಭಾಗದ ಸಂಸದ ಸದಸ್ಯರು ಮತ್ತು ಮಾಜಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಎಲ್ಲರೂ ಸಮಾಜದ ಕುರಿತು ಅಪಾರ ಗೌರವ ಭಾವನೆಗಳನ್ನು ಹೊಂದಿದ್ದು ಸದಾಕಾಲ ನಾವೆಲ್ಲರೂ ನಿಮ್ಮೊಂದಿಗೆ ಇರುತ್ತವೆ ಎಂದರು.

ಅನಂತರ ಬಿಜೆಪಿ ಮುಖಂಡ ಚಿದಾನಂದ ಸವದಿ ಅವರು ಮಾತನಾಡುತ್ತಾ ಹಿಂದುಳಿದ ಈ ಸಮಾಜವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದೆ ತರಲು ಎಲ್ಲರ ಸಹಕಾರ ಅಗತ್ಯ, ನಿಮ್ಮ ಆಶಯದಂತೆ ಈ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ನಮ್ಮ ತಂದೆಯವರ ವಿಧಾನಪರಿಷತ್ ಸದಸ್ಯರ ಅನುದಾನವನ್ನು ಒದಗಿಸಲುವಂತೆ ಅವರ ಗಮನಕ್ಕೆ ತರುವದಾಗಿ ಹೇಳಿದರು.


Spread the love

About Laxminews 24x7

Check Also

ಸಮಾನತೆಯ ಕನಸು ಕಂಡ ಸಮಾಜ ಸುಧಾರಕ ದೇವರಾಜ ಅರಸು – ಮಲ್ಲಿಕಾರ್ಜುನ ಹೋಳಿಮಠ.

Spread the love ಹುಕ್ಕೇರಿ : ಸಮಾನತೆಯ ಕನಸು ಕಂಡ ಸಮಾಜ ಸುಧಾರಕ ದೇವರಾಜ ಅರಸು – ಮಲ್ಲಿಕಾರ್ಜುನ ಹೋಳಿಮಠ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ