ಬೆಂಗಳೂರು: ಡ್ರಗ್ಸ್ ವಿಚಾರಣೆಯ ದಾರಿ ತಪ್ಪಿಸಲು ನನ್ನ ಹೆಸರನ್ನು ಬಳಕೆ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಆರೋಪ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, 2014ರಲ್ಲಿ ಪಕ್ಷದ ಸಭೆ ಮಾಡಲು ಶ್ರೀಲಂಕಾಕ್ಕೆ ಹೋಗಿದ್ದೆವು. ಗೋವಾ ಬೇರೆ ಕಡೆಗಿಂತ ಅಲ್ಲಿ ಕಡಿಮೆ ಬೆಲೆಯಾಗುತ್ತೆ ಎಂದು ಅಲ್ಲಿ ಸಭೆ ಮಾಡಿದ್ದೆವು. ಆ ವಿಚಾರವನ್ನು ಈಗ ಯಾಕೆ ಪ್ರಸ್ತಾಪ ಮಾಡುತ್ತಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು ಎಂದರು.
ಇದೇ ವೇಳೆ ಜಮೀರ್ ಅವರು ನಿಮ್ಮನ್ನು ಕರೆದುಕೊಂಡು ಹೋಗಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್‍ಡಿಕೆ, ಅವರು ನನ್ನ ಯಾಕೆ ಕರೆದುಕೊಂಡು ಹೋಗುತ್ತಾರೆ. ನಮಗೆ ಹೋಗೊದಕ್ಕೆ ಬರೋಲ್ವಾ ಎಂದು ಟಾಂಗ್ ನೀಡಿದರು. ಡ್ರಗ್ಸ್ ದಂಧೆ ಕೇವಲ ಸ್ಯಾಂಡಲ್‍ವುಡ್ ಮಾತ್ರವಲ್ಲ ಎಲ್ಲ ಕಡೆ ಇದೆ. ನಾನು ಕೂಡ ಸಿನಿಮಾ ಕ್ಷೇತ್ರದಲ್ಲಿ ಇದ್ದವನು. ಆಗ ನನ್ನ ಗಮನಕ್ಕೆ ಡ್ರಗ್ಸ್ ವಿಚಾರ ಬಂದಿಲ್ಲ. ಕ್ಯಾಸಿನೋದಲ್ಲೇ ಡ್ರಗ್ಸ್ ಇರುತ್ತೆ ಅಂತ ಹೇಳುವುಕ್ಕೆ ಆಗಲ್ಲ ಎಂದು ತಿಳಿಸಿದರು.
ಡ್ರಗ್ಸ್ ಅನ್ನೋದು ನಮ್ಮ ಬೆಂಗಳೂರಿನಲ್ಲಿ ನೈಟ್ ಬಾರ್ ಗಳಲ್ಲೂ ಇದೆ. ಸಂಜೆ ನಂತರ ಮಲ್ಯ ರೋಡ್ ಮತ್ತು ಎಂಜಿ ರೋಡ್‍ಗೆ ಹೋದರೆ ನಿಮಗೆ ಗೋತಾಗುತ್ತೆ. ಈಗಲೂ ಅದೇ ರೀತಿ ಇದ್ಯಾ ನನಗೆ ಗೊತ್ತಿಲ್ಲ. ಬೆಂಗಳೂರಿನಲ್ಲಿ ಸಂಜೆ ಮೇಲೆ ನೈಟ್ ಪಾರ್ಟಿಗಳು ನಡೆಯುತ್ತೆ. ಡ್ರಗ್ಸ್ ಮಾಫಿಯಾದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಅದನ್ನು ದಿಕ್ಕು ತಪ್ಪಿಸೋ ಕೆಲಸ ನೆಡೆಯುತ್ತಿದೆ ಎಂದು ಆರೋಪ ಮಾಡಿದರು.
ನಾನು ನಿನ್ನೆಯೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದೇನೆ. ನಾನು 1982ರಲ್ಲೇ ಕ್ಯಾಸಿನೋ ನೋಡಿದ್ದೇನೆ. ನಾನು ನನ್ನ ಧರ್ಮಪತ್ನಿ ಮಲೇಶಿಯಾಗೆ ಟೂರ್ ಹೋಗಿದ್ದೆವು. ಈ ವೇಳೆ ಅಲ್ಲಿನ ಗೈಡ್ ಕರೆದುಕೊಂಡು ಹೋಗಿದ್ದರು. ಅಲ್ಲಿ ಡ್ರಗ್ಸ್ ಇರಲಿಲ್ಲ. ಆದರೆ ಡ್ರಗ್ಸ್ ಅನ್ನೋದು ಕ್ಯಾಸಿನೋದಲ್ಲಿ ಮಾತ್ರ ನಡೆಯುತ್ತೆ ಅನ್ನೋದಲ್ಲ, ಬೆಂಗಳೂರಿನಲ್ಲಿ ನೈಟ್ ಬಾರ್ ಗಳು ಮತ್ತು ಪಾರ್ಟಿಗಳಲ್ಲೂ ಕಾಣಿಸುತ್ತಿದೆ. 5 ಸ್ಟಾರ್ ಹೋಟಲ್‍ಗಳಲ್ಲಿ ಬೆಳಗ್ಗೆ 5 ಗಂಟೆವರೆಗೂ ಮ್ಯಾಸಿಕ್ ಹಾಕಿಕೊಂಡು ನಡೆಸೋ ಪಾರ್ಟಿಗಳಲ್ಲಿ ಡ್ರಗ್ಸ್ ಇರುತ್ತೆ ಎಂದಿದ್ದಾರೆ.
ಐಪಿಎಲ್, ಕೆಪಿಎಲ್ ಮತ್ತು ಕೆಲವರು ಅವಾರ್ಡ್ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿ ನಟರನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಕಾರ್ಯಕ್ರಮ ಮಾಡಿ ಅವಾರ್ಡ್ ಕೊಡುತ್ತಾರೆ. ಈ ರೀತಿಯ ಕಾರ್ಯಕ್ರಮಗಳು ಪ್ರಾರಂಭವಾದ ನಂತರ ಡ್ರಗ್ಸ್ ದಂಧೆ ಪ್ರಾರಂಭವಾಗಿದೆ. ಜಮೀರ್ 2014ರ ವಿಚಾರವನ್ನು ಈಗ ಯಾಕೆ ತಗೆದ್ದಿದ್ದಾರೆ ಗೊತ್ತಿಲ್ಲ, ನೀವು ಅದನ್ನು ಅವರನ್ನೆ ಕೇಳಬೇಕು ಎಂದು ಹೇಳಿದರು.