Breaking News

ಶಿಂಧೆ ಬಣದಿಂದ ಶಾಸಕ ದೇಶ್​ಮುಖ್​ ಅಪಹರಣಕ್ಕೆ ಟ್ವಿಸ್ಟ್​: ಫೋಟೋ ಬಿಡುಗಡೆ ಮಾಡಿದ ರೆಬೆಲ್​ ಶಾಸಕರು!

Spread the love

ಮುಂಬೈ: ಮಹಾರಾಷ್ಟ್ರದ ರಾಜಕೀಯದ ಕುತೂಹಲ ಇನ್ನೂ ತಣ್ಣಗಾಗಿಲ್ಲ. ಯಾವಾಗ ಸರ್ಕಾರ ಪತನವಾಗುವುದೋ, ಯಾವಾಗ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ರಾಜೀನಾಮೆ ಕೊಡುವರೋ ಎಂದು ರೆಬೆಲ್​ ಶಾಸಕರು ಕಾಯುತ್ತಿದ್ದಾರೆ.

ಅದೇ ವೇಳೆ ಕುತೂಹಲದ ಬೆಳವಣಿಗೆಯೊಂದರಲ್ಲಿ ಬುಧವಾರ (ಜೂನ್​ 22) ಮಹಾರಾಷ್ಟ್ರ ಸರ್ಕಾರದ ಪತನಕ್ಕೆ ಕಾರಣವಾಗಿರುವ, ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಗುಂಪಿನಿಂದ ಶಾಸಕ ನಿತಿನ್‌ ದೇಶ್‌ಮುಖ್‌ ಹಾಗೂ ಶಾಸಕ ಕೈಲಾಸ್​ ಪಾಟೀಲ್​ ತಪ್ಪಿಸಿಕೊಂಡು ಬಂದಿದ್ದರು.

ಸೀದಾ ಉದ್ಧವ್‌ ಠಾಕ್ರೆ ಬಳಿ ಬಂದಿದ್ದ ಇವರು, ತಾವು ಠಾಕ್ರೆ ಪರ ಎಂದು ಹೇಳಿಕೊಂಡಿದ್ದರು.

ಈ ಕುರಿತು ಮಾತನಾಡಿದ್ದ ದೇಶ್​ಮುಖ್​, ನಾನು ಶಿಂಧೆ ಕ್ಯಾಂಪ್‌ನಿಂದ ತಪ್ಪಿಸಿಕೊಂಡು ಬಂದಿದ್ದೇನೆ. ನನ್ನನ್ನು ಕಿಡ್ನ್ಯಾಪ್‌ ಮಾಡಿಕೊಂಡು ಗುಜರಾತ್‌ನ ಸೂರತ್‌ಗೆ ಕರೆದುಕೊಡು ಹೋಗಿದ್ದರು. ಮಧ್ಯರಾತ್ರಿ ಹೇಗೋ ತಪ್ಪಿಸಿಕೊಂಡು ಬಂದೆ. ನಸುಕಿನ 3 ಗಂಟೆ ವೇಳೆ ರಸ್ತೆ ಬದಿಗೆ ಬಂದು, ವಾಹನಕ್ಕಾಗಿ ಕಾಯುತ್ತಿದ್ದೆ. ಈ ಸಂದರ್ಭದಲ್ಲಿ ನೂರಾರು ಪೊಲೀಸರು ಸುತ್ತುವರಿದು ಆಸ್ಪತ್ರೆ ಸೇರಿಸಿದರು. ನನಗೆ ಹೃದಯಾಘಾತ ಆಗಿದೆ ನಾಟಕ ಮಾಡಿ ನನ್ನನ್ನು ಉಪಚರಿಸಿದಂತೆ ನಾಟಕ ಮಾಡಿದರು. ನನಗೆ ಏನೂ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಅವರು ನನ್ನನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು’ ಎಂದು ತಿಳಿಸಿದ್ದರು.

ಈ ಹೇಳಿಕೆಗೆ ರೆಬೆಲ್​ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಬಂಡಾಯ ಶಾಸಕರ ಗುಂಪಿನೊಂದಿಗೆ ನಿತಿನ್​ ದೇಶ್​ಮುಖ್ ಆರಾಮಾಗಿಯೇ ಇರುವ ಫೋಟೋಗಳು ಬಿಡುಗಡೆಮಾಡಿದ್ದಾರೆ. ದೇಶ್​ಮುಖ್ ವಿಮಾನ ಏರುವ ಹಾಗೂ ವಿಮಾನದಲ್ಲಿ ಕುಳಿತುಕೊಂಡಿರುವ ಫೋಟೋಗಳು ಇವಾಗಿವೆ. ಅದರಲ್ಲಿ ದೇಶ್​ಮುಖ್​ ಅವರು ಸ್ವ ಇಚ್ಛೆಯಿಂದ ಹೋಗುತ್ತಿರುವಂತೆ ಗೋಚರಿಸುತ್ತಿದೆ!


Spread the love

About Laxminews 24x7

Check Also

ಬಾಬಾನಗರದ ನೆಲದಲ್ಲಿ ಹೊಸ ಕೃಷಿ ಕ್ರಾಂತಿ; ರೆಡ್ ಡೈಮಂಡ್ ಪೇರಲ ಬೆಳೆದು ಸಚಿವರಿಗೆ ಉಡುಗೊರೆ ನೀಡಿದ ರೈತ*

Spread the love : ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬರುವ ತಿಕೋಟಾ ತಾಲ್ಲೂಕಿನ ಬಾಬಾನಗರದ ನೆಲದಲ್ಲಿ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ