Breaking News

ಗರೀಬ್ ಕಲ್ಯಾಣ್ ಅನ್ನ ಯೋಜನೆ: ಬಿಪಿಎಲ್ ಸೇರಿ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್

Spread the love

ಧಾರವಾಡ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ.

ಅಂತ್ಯೋದಯ ಪಡಿತರ ಚೀಟಿದಾರರಿಗೆ 15 ಕೆಜಿ ಅಕ್ಕಿ, 20 ಕೆಜಿ ಜೋಳ, ಬಿಪಿಎಲ್ ಕಾರ್ಡಿನ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 3 ಕೆಜಿ ಅಕ್ಕಿ ಹಾಗೂ 2 ಕೆಜಿ ಜೋಳ ಉಚಿತವಾಗಿ ವಿತರಿಸಲಾಗುತ್ತದೆ.

ಕಳೆದ ಏಪ್ರಿಲ್ ನಿಂದ ಗೋಧಿ ಹಂಚಿಕೆ ಸ್ಥಗಿತಗೊಳಿಸಲಾಗಿದೆ. ಕೆಲವೆಡೆ ಗೋಧಿ ದಾಸ್ತಾನು ಉಳಿದಿದ್ದು, ಆದ್ಯತೆಯ ಮೇಲೆ ಮೊದಲು ಬಂದ ಕಾರ್ಡುದಾರರಿಗೆ ಪ್ರತಿ ಕಾರ್ಡಿಗೆ 2 ಕೆಜಿ ಗೋಧಿ ವಿತರಿಸಲಾಗುವುದು.

ಗ್ರಾಹಕರು ಹಂಚಿಕೆಯಾಗಿರುವ ಪಡಿತರವನ್ನು ನಿಗದಿತ ಸರಿಯಾದ ಪ್ರಮಾಣದಲ್ಲಿ ಪಡೆಯಬೇಕು. ನ್ಯಾಯಬೆಲೆ ಅಂಗಡಿಕಾರರು ಕಡಿಮೆ ಪ್ರಮಾಣದ ಆಹಾರ ಧಾನ್ಯ ನೀಡಿದರೆ ಜಿಲ್ಲಾಧಿಕಾರಿಗಳ ಕಚೇರಿಯ ಆಹಾರ ಶಾಖೆ ದೂರವಾಣಿ ಸಂಖ್ಯೆ 0836-2444594, ಧಾರವಾಡ ಪಡಿತರ ಪ್ರದೇಶ ಆಹಾರ ನಿರೀಕ್ಷಕರು-8088737170, ಧಾರವಾಡ ತಾಲ್ಲೂಕು-ಆಹಾರ ಶಿರಸ್ತೇದಾರರು-9845059245, ಆಹಾರ ನಿರೀಕ್ಷಕರು-8310109795, ಅಳ್ನಾವರ-9448221892, ಹುಬ್ಬಳ್ಳಿ ಪಡಿತರ ಪ್ರದೇಶ-ಸಹಾಯಕ ನಿರ್ದೇಶಕರು-9611123128, ಆಹಾರ ನಿರೀಕ್ಷಕರು-8310490713, ಆಹಾರ ನಿರೀಕ್ಷಕರು-9886320360, ಹುಬ್ಬಳ್ಳಿ ತಾಲ್ಲೂಕು ಆಹಾರ ಶಿರಸ್ತೇದಾರರು-9035074105, ಆಹಾರ ನಿರೀಕ್ಷಕರು-9482532326, ಕಲಘಟಗಿ ತಾಲ್ಲೂಕು ಆಹಾರ ನಿರೀಕ್ಷಕರು-ಮೊ.ಸಂ.-9741304522, ಕುಂದಗೋಳ ತಾಲ್ಲೂಕು ಆಹಾರ ನಿರೀಕ್ಷಕರು-8618525185, ನವಲಗುಂದ ತಾಲ್ಲೂಕು-ಆಹಾರ ನಿರೀಕ್ಷಕರು-9902142458 ಮಾಹಿತಿ ನೀಡಿದರೆ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.


Spread the love

About Laxminews 24x7

Check Also

ಧಾರವಾಡದ ನವಲಗುಂದದಲ್ಲಿ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಪ್ರಕರಣ.. ಹಲ್ಲೆ ನಡೆಸಿದ ಆರೋಪಿ ಬಂಧನ.

Spread the love ಧಾರವಾಡದ ನವಲಗುಂದದಲ್ಲಿ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಪ್ರಕರಣ.. ಹಲ್ಲೆ ನಡೆಸಿದ ಆರೋಪಿ ಬಂಧನ. ಕರ್ತವ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ